ಮಲಪ್ಪುರಂ: ಕೇರಳ ಪೊಲೀಸ್‌ನ ಭಯೋತ್ಪಾದನಾ ವಿರೋಧಿ ದಳದ ಸಿಬ್ಬಂದಿ ಮಂಗಳವಾರ ಸಿಪಿಐ ಕಾರ್ಯಕರ್ತ ಸಿ.ಪಿ.ಉಸ್ಮಾನ್ ಎಂಬಾತನನ್ನು ಬಂಧಿಸಿದ್ದಾರೆ.
ಸಿ.ಪಿ.ಉಸ್ಮಾನ್ ವಿರುದ್ಧ 2019ರಲ್ಲಿ ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ವಿಸ್ತರಿಸುವ ಸಂಘಟನೆಯೊಂದರ ಜೊತೆಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಆರೋಪವಿದೆ ಎಂದು ಪೊಲೀಸರು ತಿಳಿಸಿದ್ದಾರೆ.


