HEALTH TIPS

ಆನೆಗಳನ್ನು ಆತಂಕವಾದಿಯಂತೆ ಬಿಂಬಿಸಬೇಡಿ: ಹಿಂದಿ ಮಾಧ್ಯಮಗಳಿಗೆ ಪರಿಸರ ಮತ್ತು ಅರಣ್ಯ ಇಲಾಖೆ ಸೂಚನೆ!

                    ನವದೆಹಲಿ :ಹಿಂದಿ ಪತ್ರಿಕೆ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಆನೆಗಳ ಮೇಲೆ ಕೆಟ್ಟ ಭಾಷೆಯನ್ನು ಪ್ರಯೋಗಿಸುತ್ತಿರುವುದನ್ನು ಗಮನಿಸಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಈ ಬಗ್ಗೆ ಮಾಧ್ಯಮಗಳಿಗೆ ಸೂಚನೆ ನೀಡಿದೆ.

             ಆನೆಗಳ ಕುರಿತಾದ ಬಹುತೇಕ ಸುದ್ದಿಗಳಲ್ಲಿ ಆನೆಗಳನ್ನು ಉಲ್ಲೇಖಿಸುವಾಗ ಪ್ರಚೋದನಕಾರಿಯಾದ ಪದಗಳ ಬಳಕೆ ಮಾಡಿರುವುದನ್ನು ಇಲಾಖೆ ಪ್ರಶ್ನಿಸಿದೆ. ಈ ರೀತಿ ಆನೆಗಳ ಬಗ್ಗೆ ಕೆಟ್ಟ ಭಾವನೆ ಮೂಡುವಂತೆ ಬರೆಯುವುದರಿಂದ ಸಾರ್ವಜನಿಕರಲ್ಲಿ ಆನೆಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತಿದೆ ಎಂದು ವನ್ಯಜೀವಿ ತಜ್ಞರು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು.

               ಹಿಂದಿ ಮಾಧ್ಯಮಗಳಲ್ಲಿ ಆನೆಗಳನ್ನು ಆತಂಕವಾದಿ, ಉತ್ಪಾತಿ, ಹಿಂಸಾವಾದಿ, ಕೊಲೆಗಾರ ಎಂಬಿತ್ಯಾದಿ ಪದಗಳಿಂದ ವರ್ಣಿಸಿದ್ದವು. ಈ ಕುರಿತಾದ ಪತ್ರಿಕೆ ಸುದ್ದಿಗಳು ಮತ್ತು ಎಲೆಕ್ಟ್ರಾನಿಕ್ ಮೀಡಿಯಾ ವರದಿ ಪ್ರತಿಗಳನ್ನು ವನ್ಯಜೀವಿ ತಜ್ಞ ನಿತಿನ್ ಸಿಂಘ್ವಿ ಎಂಬುವವರು ಪರಿಸರ ಮತ್ತು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries