HEALTH TIPS

ತಮಿಳು ದೇವರ ಭಾಷೆ: ಮದ್ರಾಸ್‌ ಹೈಕೋರ್ಟ್‌

                 ಚೆನ್ನೈ: 'ತಮಿಳು ಭಾಷೆಯನ್ನು ದೇವರ ಭಾಷೆ‌' ಎಂದು ಕರೆದಿರುವ ಮದ್ರಾಸ್‌ ಹೈಕೋರ್ಟ್‌, ದೇಶದಾದ್ಯಂತ ದೇವಸ್ಥಾನಗಳ ಪ್ರತಿಷ್ಠಾಪನೆಯನ್ನು ಕವಿ ಅರುಣಗಿರಿನಾಥರ್‌, ಅಝ್ವರ್‌ ಮತ್ತು ನಾಯನ್ಮಾರ್‌ಗಳಂತಹ ಸಂತರು ರಚಿಸಿದ ತಮಿಳು ಸ್ತೋತ್ರಗಳೊಂದಿಗೆ ನೆರವೇರಿಸಬೇಕು' ಎಂದು ಹೇಳಿದೆ.

             ಸಂತ ಅಮರಾವತಿ ಆತರಂಗರೈ ಕರೂರರ ಅವರ ಹಾಡು ಮತ್ತು ಶೈವ ಮಂತ್ರಗಳೊಂದಿಗೆ (ಸ್ತೋತ್ರಗಳು) ಕರೂರ್‌ ಜಿಲ್ಲೆಯ ದೇವಸ್ಥಾನದ ಪ್ರತಿಷ್ಠಾಪನೆಯನ್ನು (ಕುಟಮುಲುಕು) ನೆರವೇರಿಸುವಂತೆ ಆಯುಕ್ತರು, ಹಿಂದೂ ಧಾರ್ಮಿಕ ಮತ್ತು ದತ್ತಿ ಸೇರಿದಂತೆ ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

            ಇತ್ತೀಚಿಗೆ ಈ ಅರ್ಜಿ ವಿಚಾರಣೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಎನ್‌.ಕಿರುಬಕರನ್‌ ಮತ್ತು ನ್ಯಾಯಮೂರ್ತಿ ಬಿ.ಪುಗಲೆಂಧಿ ಅವರನ್ನೊಳಗೊಂಡ ಪೀಠವು, 'ಕೇವಲ ಒಂದು ದೇವಸ್ಥಾನ ಮಾತ್ರವಲ್ಲದೇ ದೇಶದ ಇತರ ದೇವಸ್ಥಾನಗಳಲ್ಲೂ ತಮಿಳು ಸ್ತೋತ್ರಗಳನ್ನು‍ ಪಠಿಸಬೇಕು. ನಮ್ಮ ದೇಶದಲ್ಲಿ ಕೇವಲ ಸಂಸ್ಕೃತ ದೇವರ ಭಾಷೆ ಎಂದು ನಂಬುವಂತೆ ಮಾಡಲಾಗಿದೆ' ಎಂದು ಹೇಳಿದೆ.

'ವಿವಿಧ ದೇಶ ಮತ್ತು ಧರ್ಮಗಳಲ್ಲಿ ಹಲವು ರೀತಿಯ ನಂಬಿಕೆಗಳು ಅಸ್ತಿತ್ವದಲ್ಲಿ ಇದ್ದವು. ಸಂಸ್ಕೃತಿ ಮತ್ತು ಧರ್ಮಕ್ಕೆ ಅನುಗುಣವಾಗಿ ಆರಾಧನಾ ಸ್ಥಳಗಳು ಕೂಡ ಬದಲಾಗುತ್ತವೆ. ಆ ಸ್ಥಳಗಳಲ್ಲಿ ಸ್ಥಳೀಯ ಭಾಷೆಯನ್ನು ಮಾತ್ರ ಸ್ವರ್ಗೀಯ ಸೇವೆಗಾಗಿ ಬಳಸಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಕೇವಲ ಸಂಸ್ಕೃತ ಭಾಷೆಗೆ ಆದ್ಯತೆ ನೀಡಲಾಗಿದ್ದು, ಬೇರೆ ಭಾಷೆ ಇದಕ್ಕೆ ಸಮಾನವಲ್ಲ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ' ಎಂದು ಪೀಠ ತಿಳಿಸಿದೆ.

             'ಸಂಸ್ಕೃತ ಆಗಾಧ ಪ್ರಾಚೀನ ಸಾಹಿತ್ಯವನ್ನು ಹೊಂದಿರುವ ಭಾಷೆ ಎಂಬುದರಲ್ಲಿ ಯಾವುದೇ ಸಂದೇಹಗಳಿಲ್ಲ. ಆದರೆ ನಮ್ಮ ದೇಶದಲ್ಲಿ ಕೇವಲ ಸಂಸ್ಕೃತ ಭಾಷೆಯಲ್ಲಿ ವೇದಗಳನ್ನು ಪಠಿಸಿದರೆ ಮಾತ್ರ ದೇವರು ಭಕ್ತರ ಪ್ರಾರ್ಥನೆಗಳನ್ನು ಆಲಿಸುತ್ತಾರೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ' ಎಂದು ಪೀಠ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries