ಕಾಸರಗೋಡು: ಬೇಡಡ್ಕ ಗ್ರಾಮ ಪಂಚಾಯತ್ ಮತ್ತು ನೀಲೇಶ್ವರ ನಗರಸಭೆ ನವಕೇರಳ ಪ್ರಶಸ್ತಿಗೆ ಭಾಜವಾಗಿವೆ.
ರಾಜ್ಯ ಸರಕಾರದ 100 ದಿನಗಳ ಕ್ರಿಯಾ ಯೋಜನೆ ಅಂಗವಾಗಿ ಘನತ್ಯಾಜ್ಯ ಸಂಸ್ಕರಣೆಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹರಿತ ಕೇರಳಂ ಮಿಷನ್ ಮತ್ತು ಶುಚಿತ್ವ ಮಿಷನ್ ಗಳು ನೀಡುವ ನವಕೇರಳ ಪ್ರಶಸ್ತಿಗೆ ಈ ಸ್ಥಳೀಯಾಡಳಿತ ಸಂಸ್ಥೇಗಳು ಪಾತ್ರವಾದುವು.
2 ಲಕ್ಷ ರೂ. ಮತ್ತು ಅರ್ಹತಾಪತ್ರ ವನ್ನು ಈ ಪ್ರಶಸ್ತಿ ಒಳಗೊಂಡಿದೆ. ಪ್ರಶಸ್ತಿಯ ರಾಜ್ಯ ಮಟ್ಟದ ಪ್ರದಾನ ಸೆ.16ರಂದು ಮಧ್ಯಾಹ್ನ 3 ಗಂಟೆಗೆ ಆನ್ ಲೈನ್ ರೂಪದಲ್ಲಿ ನಡೆಯಲಿದೆ. ಸ್ಥಳೀಯಾಡಳಿತ ಸಂಸ್ಥೆ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಉದ್ಘಾಟಿಸುವರು. ಜಿಲ್ಲಾ ಮಟ್ಟದ ಪ್ರಶಸ್ತಿ ವಿತರಣೆ ಸೆ. 20ರಂದು ನೀಲೇಶ್ವರ ನಗರಸಭೆಯಲ್ಲಿ, ಸೆ.25ರಂದು ಬೇಡಡ್ಕ ಗ್ರಾಮಪಂಚಾಯತ್ ನಲ್ಲೂ ನಡೆಯಲಿವೆ.

