HEALTH TIPS

ಕುಂಟುತ್ತಿದೆ ಭಾರತ್‌ನೆಟ್: ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಯೋಜನೆ

             ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಹಿಂದಿನ ಸರ್ಕಾರದ ಹಲವು ಯೋಜನೆಗಳ ಹೆಸರನ್ನು ಬದಲಿಸಿತ್ತು. 2011ರಲ್ಲಿ ಯುಪಿಎ-2 ಸರ್ಕಾರವು 'ರಾಷ್ಟ್ರೀಯ ಆಪ್ಟಿಕಲ್ ಫೈಬರ್ ಜಾಲ' ಯೋಜನೆಯನ್ನು ಆರಂಭಿಸಿತ್ತು. 2014ರ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ, 'ಭಾರತ್‌ನೆಟ್' ಎಂದು ಮರುನಾಮಕರಣ ಮಾಡಿದರು.

            2020ರ ಅಂತ್ಯದ ವೇಳೆಗೆ ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್‌ ಮೂಲಕ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವುದು ಯೋಜನೆಯ ಗುರಿಯಾಗಿತ್ತು. ಯೋಜನೆ ಆರಂಭವಾಗಿ 10 ವರ್ಷ ಕಳೆದರೂ, ಮರುನಾಮಕರಣ ಮಾಡಿ ಏಳು ವರ್ಷ ಕಳೆದರೂ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಸರ್ಕಾರ ಪದೇ ಪದೇ ಯೋಜನೆಯ ಅವಧಿಯನ್ನು ವಿಸ್ತರಿಸುತ್ತಲೇ ಇದೆ

10 ವರ್ಷದಲ್ಲಿ 7 ಬಾರಿ ಗಡುವು ಮುಂದೂಡಿಕೆ

2011ರಲ್ಲಿ ಯೋಜನೆ ಆರಂಭವಾದಾಗ, ಮುಂದಿನ 2 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು

2015

2013ರಲ್ಲಿ ಯೋಜನೆ ಪೂರ್ಣಗೊಳ್ಳದ ಕಾರಣ, ಗಡುವನ್ನು ಮತ್ತೆ 24 ತಿಂಗಳು ವಿಸ್ತರಿಸಲಾಯಿತು

2017

ಕೇಂದ್ರದಲ್ಲಿ ಅಧಿಕಾರ ಬದಲಾವಣೆಯೊಂದಿಗೆ ಯೋಜನೆಗೆ ಭಾರತ್‌ನೆಟ್ ಎಂಬ ಹೆಸರೂ ಬಂದಿತು. 2018ರೊಳಗೆ 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಇಂಟರ್‌ನೆಟ್ ಒದಗಿಸುವುದಾಗಿ ಹೊಸ ಸರ್ಕಾರ ಹೇಳಿತು

2018

ಮತ್ತೆ 12 ತಿಂಗಳ ಕಾಲ ಯೋಜನೆಯ ಗಡುವನ್ನು ವಿಸ್ತರಿಸಲಾಯಿತು

2019

ಮತ್ತೊ ಒಂದು ವರ್ಷ ಮುಂದೂಡಿಕೆ ಮಾಡಲಾಯಿತು. ಮಾರ್ಚ್ 2020ಕ್ಕೆ ಹೊಸ ಗಡುವು ನೀಡಲಾಯಿತು

2020

ಮಾರ್ಚ್‌ಗೆ ಮುಗಿಯುವ ಬದಲು ಮತ್ತೆ 17 ತಿಂಗಳು ವಿಸ್ತರಣೆ ನೀಡಲಾಯಿತು. ಆದರೆ ಕೋವಿಡ್ ಲಾಕ್‌ಡೌನ್ ಕಾರಣದಿಂದ ಅದು ಮತ್ತೆ ಮುಂದೆ ಹೋಗಿದೆ

2021

ದೇಶದ 6 ಲಕ್ಷ ಗ್ರಾಮಗಳಿಗೆ ಮುಂದಿನ 1,000 ದಿನಗಳಲ್ಲಿ ಇಂಟರ್‌ನೆಟ್ ಸಂಪರ್ಕ ಕಲ್ಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2021ರ ಆಗಸ್ಟ್ 15ರ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ತಿಳಿಸಿದ್ದರು

ಯೋಜನೆಯ ಹಂತ ಹಾಗೂ ಗುರಿಗಳು

* 2017; ಮೊದಲ ಹಂತದಲ್ಲಿ 1 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಭೂಗತ ಆಪ್ಟಿಕ್ ಫೈಬರ್ ಕೇಬಲ್ (ಒಎಫ್‌ಸಿ) ಹಾಕುವ ಮೂಲಕ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸುವುದು

* 2019; ಎರಡನೇ ಹಂತದಲ್ಲಿ ದೇಶದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಭೂಗತ ಫೈಬರ್, ಫೈಬರ್ ಓವರ್ ಪವರ್ ಲೈನ್ಸ್, ರೇಡಿಯೊ ಮತ್ತು ಉಪಗ್ರಹ ಮಾಧ್ಯಮದ ಅತ್ಯುತ್ತಮ ಸಂಪರ್ಕ ಒದಗಿಸುವುದು

* 2019-2023; ಮೂರನೇ ಹಂತದಲ್ಲಿ ಅತ್ಯಾಧುನಿಕ, ಫ್ಯೂಚರ್‌ ಪ್ರೂಫ್ ನೆಟ್‌ವರ್ಕ್‌, ಜಿಲ್ಲೆಗಳು ಮತ್ತು ಬ್ಲಾಕ್‌ಗಳ ನಡುವೆ ಫೈಬರ್ ಸೇರಿದಂತೆ ರಿಂಗ್ ಟೋಪೋಲಜಿ ಒದಗಿಸುವುದು.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries