HEALTH TIPS

ಮುಂಬೈ ದಾಳಿಗೆ 13 ವರ್ಷ: ಭದ್ರತಾ ತಾಲೀಮು ಆಯೋಜನೆ -ಐಸಿಜಿ ಮುಖ್ಯಸ್ಥ ನಟರಾಜನ್


        ನವದೆಹಲಿ: ಮುಂಬೈ ಮೇಲೆ 2008ರ ನ.26ರಂದು ಭಯೋತ್ಪಾದಕರ ದಾಳಿ ನಡೆದ ನಂತರ ಕರಾವಳಿ ಭದ್ರತೆಗೆ ಸಂಬಂಧಿಸಿ 300ಕ್ಕೂ ಹೆಚ್ಚು ಅಭ್ಯಾಸಗಳನ್ನು ಕೈಗೊಳ್ಳಲಾಗಿದೆ ಎಂದು ಇಂಡಿಯನ್ ಕೋಸ್ಟ್‌ಗಾರ್ಡ್‌ (ಐಸಿಜಿ) ಪ್ರಧಾನ ನಿರ್ದೇಶಕ ಕೆ.ನಟರಾಜನ್ ಗುರುವಾರ ಇಲ್ಲಿ ಹೇಳಿದರು.
        ಕರಾವಳಿಯ ರಾಜ್ಯವೊಂದರ ಸಹಯೋಗದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಐಸಿಜಿ ಇಂತಹ ಅಭ್ಯಾಸ ಹಮ್ಮಿಕೊಳ್ಳುತ್ತದೆ' ಎಂದೂ ಅವರು ಹೇಳಿದರು.

        ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಗೆ 13 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.

       ರಾಷ್ಟ್ರೀಯ ಸಾಗರ ಶೋಧ ಹಾಗೂ ರಕ್ಷಣಾ ಮಂಡಳಿಯ 19ನೇ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, 'ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಡೆದ ನಂತರ, ಕಡಲ ಭದ್ರತೆ ವಿಷಯದಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಸುಧಾರಣೆಗಳನ್ನು ತಂದಿದೆ' ಎಂದರು.

      'ಸಹಕಾರ ಹಾಗೂ ಸಮನ್ವಯ ಎಂಬ ಮಂತ್ರದಿಂದ ಮಾತ್ರ ಭವಿಷ್ಯದಲ್ಲಿ ಇಂತಹ ಭಯೋತ್ಪಾದಕ ದಾಳಿ ನಡೆಯದಂತೆ ನೋಡಿಕೊಳ್ಳಲು ಸಾಧ್ಯ' ಎಂದೂ ಅವರು ಪ್ರತಿಪಾದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries