HEALTH TIPS

ಶ್ರೀನಗರದಲ್ಲಿ ಮೈನಸ್ 1.5 ಡಿಗ್ರಿ ಕನಿಷ್ಠ ತಾಪಮಾನ

               ಶ್ರೀನಗರಕಾಶ್ಮೀರದಾದ್ಯಂತ ಶನಿವಾರ ತೀವ್ರತರ ಚಳಿ ಆರಂಭವಾಗಿದ್ದು, ಹಲವು ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಕನಿಷ್ಠ ತಾಪಮಾನ ದಾಖಲಾಗಿದೆ.

              ರಾಜಧಾನಿ ಶ್ರೀನಗರದಲ್ಲಿ ಮೈನಸ್ 1.5 ಡಿಗ್ರಿ ಸೆಲ್ಸಿಯಸ್‌, ಪಹಲ್ಗಾಮ್‌ನಲ್ಲಿ ಮೈನಸ್ 4.3 ಡಿಗ್ರಿ ಸೆಲ್ಸಿಯಸ್‌, ಕುಪ್ವಾರದಲ್ಲಿ ಮೈನಸ್ 2.7, ಗುಲ್ ಮಾರ್ಗ್‌ನಲ್ಲಿ ಮೈನಸ್ 1, ಕ್ವಾಜಿಗುಂಡದಲ್ಲಿ ಮೈನಸ್ 1.8, ಕೋಕನಾರ್ಗ್‌ನಲ್ಲಿ ಮೈನಸ್ 1.3 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.

            ಶನಿವಾರ ಮುಂಜಾನೆ ಕಾಶ್ಮೀರದ ಬಹುತೇಕ ಭಾಗಗಳಲ್ಲಿ ದಟ್ಟನೆಯ ಮಂಜು ಕವಿದ ವಾತಾವರಣದಿಂದ ಕೂಡಿದ್ದು, ಇದರಿಂದ ವಾಹನ ಸವಾರರ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

             ನವೆಂಬರ್‌ 23ರವರೆಗೆ ಇದೇ ವಾತಾವರಣ ಮುಂದುವರೆಯಲಿದ್ದು, ನ.24ರ ನಂತರ ಉತ್ತರ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಹಿಮ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries