ತಿರುವನಂತಪುರ: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ 2.40 ಲಕ್ಷ ಡೋಸ್ ಕೊರೊನಾ ಲಸಿಕೆ ಸಂಗ್ರಹವಾಗಿದೆ ಎಂದು ವರದಿಯಾಗಿದೆ. ಇದರಲ್ಲಿ ರಾಜ್ಯ ಸರ್ಕಾರವು ವೈದ್ಯಕೀಯ ಸೇವಾ ನಿಗಮದ ಮೂಲಕ ವಿತರಿಸುವ ಲಸಿಕೆಯನ್ನು ಒಳಗೊಂಡಿದೆ. ಲಸಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರೂ ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಕೇರಳ ಖಾಸಗಿ ಆಸ್ಪತ್ರೆಗಳ ಸಂಘವು 2.40 ಲಕ್ಷ ಡೋಸೇಜ್ ಕೋವಿಶೀಲ್ಡ್ ಲಸಿಕೆಗಳು 50 ಖಾಸಗಿ ಆಸ್ಪತ್ರೆಗಳಲ್ಲಿ ಉಳಿಕೆಯಾಗಿದೆ. ಹತ್ತು ಡೋಸ್ ಲಸಿಕೆಯ ಬೆಲೆ 6300 ರೂ.ಇದೆ.
ಕೋವ್ಶೀಲ್ಡ್ ಲಸಿಕೆಯ ಅವಧಿಯು ಆರು ತಿಂಗಳುಗಳು. ಪರಿಣಾಮವಾಗಿ, ಉಳಿಕೆಯಾಗುವ ಲಸಿಕೆಗಳನ್ನು ನಾಶಪಡಿಸದೆ ಬೇರೆದಾರಿಯಿಲ್ಲ. ಕೇಂದ್ರ ಸರ್ಕಾರದ ನೆರವಿನೊಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿ ಮತ್ತು ಸುಲಭವಾಗಿ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಬೇಡಿಕೆ ಕಡಿಮೆಯಾಗಿದೆ.




