ತಿರುವನಂತಪುರ: ಕೇಂದ್ರದ `50,000 ಕೋಟಿ ಯೋಜನೆಯಡಿ ರಾಜ್ಯದಲ್ಲಿ ಆರು ಪಥ(ಷಟ್ಪಥ) ಹೆದ್ದಾರಿಗಳ ಪ್ರಾಥಮಿಕ ಕಾಮಗಾರಿ ಆರಂಭಿಸಲಾಗಿದೆ. ಯೋಜನೆಯು 2024 ರ ವೇಳೆಗೆ ಯೋಜನೆಯನ್ನು ಸಾಕಾರಗೊಳಿಸುವ ಗುರಿಯನ್ನು ಹೊಂದಿದೆ. ಭೂಸ್ವಾಧೀನ ಪೂರ್ಣಗೊಂಡಿರುವ ಕಾಸರಗೋಡು, ಕಣ್ಣೂರು, ಮಲಪ್ಪುರಂ ಮತ್ತು ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಪ್ರಾಥಮಿಕ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.
ಪ್ರಸ್ತುತ ದ್ವಿಪಥ ಮತ್ತು ಚತುಷ್ಪಥ ರಸ್ತೆಗಳನ್ನು ಉದ್ದೇಶಿತ ರಸ್ತೆಯಲ್ಲಿ ಆರು ಲೇನ್‍ಗಳಿಗೆ (45 ಮೀ) ವಿಸ್ತರಿಸಲಾಗುವುದು.
ಎನ್.ಎಚ್.66 ರಸ್ತೆ ಯೋಜನೆಯು ಮುಂಬೈ ಬಳಿಯ ರಾಯಗಡ ಜಿಲ್ಲೆಯ ಪನವೇಲ್‍ನಿಂದ ಪ್ರಾರಂಭವಾಗಿ ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳಲಿದೆ. ರಸ್ತೆಯ ಒಟ್ಟು ಉದ್ದ 1622 ಕಿ.ಮೀ., ಕೊಡುಂಗಲ್ಲೂರು-ಎಡಪ್ಪಳ್ಳಿ, ಎಡಪಳ್ಳಿ-ತುರವೂರು, ಪರವೂರು-ಕೊಟ್ಟಂಕುಳಂಗರ ಮತ್ತು ಕಡಂಪಟ್ಟುಕೋಣಂ-ಕಳಕೂಟಂ ವ್ಯಾಪ್ತಿಯ ಟೆಂಡರ್ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿ.




