ಕಾಸರಗೋಡು: ವಿದ್ಯಾರ್ಥಿಯೊಬ್ಬನಿಂದ ಕಾಲುಹಿಡಿಸಿ ಕ್ಷಮೆ ಕೇಳಿಸಲಾಗಿದೆ ಎಂದು ಪ್ರಾಂಶುಪಾಲೆಯ ವಿರುದ್ದ ಆರೋಪ ಮಾಡಿದ ಪ್ರಕರಣದಲ್ಲಿ ಪ್ರಾಂಶುಪಾಲರ ದೂರಿನ ಮೇರೆಗೆ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ವಿದ್ಯಾರ್ಥಿಯ ಮೇಲೆ ಕಾಲೆಳೆದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ ಮೊಹಮ್ಮದ್ ಸಾಬಿರ್ ಸನದ್ ವಿರುದ್ಧ ಕಾಸರಗೋಡು ಮಹಿಳಾ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಲೇಜು ಅಧಿಕಾರಿಗಳು ದೂರು ನೀಡಿದ್ದಾರೆ. ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಲ್ಲಿ ವಿದ್ಯಾರ್ಥಿಯೊಬ್ಬ ಕಾಲುಹಿಡಿದು ಕ್ಷಮೆ ಕೇಳಲಾಗಿದೆ ಎಮದು ಗುಲ್ಲೆಬ್ಬಿಸಲಾಗಿದೆ. ಆದರೆ ವಿದ್ಯಾರ್ಥಿ ಸ್ವಯಂಪ್ರೇರಣೆಯಿಂದ ಕಾಲಿಗೆ ಬಿದ್ದಿದ್ದಾನೆ ಎಂದು ಪ್ರಾಂಶುಪಾಲರು ವಿವರಿಸಿದ್ದಾರೆ. ಈ ಘಟನೆ ಕಳೆದ ಕೆಲ ದಿನಗಳಿಂದ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಕಾಸರಗೋಡು ಸರ್ಕಾರಿ ಕಾಲೇಜು ಪ್ರಭಾರ ಪ್ರಾಂಶುಪಾಲೆ ಡಾ. ಕೆ. ರೆಮಾ ವಿರುದ್ಧ ದೂರು ದಾಖಲಾಗಿದೆ. ಎರಡನೇ ವರ್ಷದ ಪದವಿ ವಿದ್ಯಾರ್ಥಿ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದ ಎನ್ನಲಾಗಿದೆ. ಕಳೆದ ತಿಂಗಳು 18ರಂದು ಘಟನೆ ನಡೆದಿತ್ತು.
ಆದರೆ ಈ ಆರೋಪ ತಪ್ಪು ಎಂದು ರೆಮಾ ಸ್ಪಷ್ಟಪಡಿಸಿದ್ದಾರೆ. ಮಾಸ್ಕ್ ಹಾಕದೇ ಇರುವುದನ್ನು ಪ್ರಶ್ನಿಸಿದಾಗ ವಿದ್ಯಾರ್ಥಿ ತಾನೇ ಸ್ವಯಂ ಪ್ರೇರಣೆಯಿಂದ ಕಾಲುಹಿಡಿದಿದ್ದ. ಸುತ್ತಮುತ್ತ ನಿಂತಿದ್ದ ಇತರ ವಿದ್ಯಾರ್ಥಿಗಳು ಆತನನ್ನು ಆತನನ್ನು ಬಳಿಕ ಅಲ್ಲಿಂದ ಸಾಗಹಾಕಿದರು. ಪೋಲೀಸರಿಗೆ ದೂರು ನೀಡಬೇಡಿ ಮತ್ತು ಕ್ಷಮೆಯಾಚಿಸುವುದಾಗಿ ವಿದ್ಯಾರ್ಥಿಯು ಸ್ವಯಂಪ್ರೇರಣೆಯಿಂದ ಕಾಲಿಗೆ ಬಿದ್ದಿದ್ದ ಎಂದು ರೆಮಾ ಹೇಳಿದ್ದಾರೆ. ಇದೇ ವೇಳೆ ಈ ವಿಚಾರವನ್ನು ಕೈಗೆತ್ತಿಕೊಂಡ ಎಂಎಸ್‍ಎಫ್ ಕಾರ್ಯಕರ್ತರು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ರಮಾ ದೂರಿನಲ್ಲಿ ತಿಳಿಸಿದ್ದಾರೆ.




