HEALTH TIPS

ಗೋವಾದಲ್ಲಿ ತೆರೆದುಕೊಂಡಿತು ಜಗಮಗಿಸುವ ಬಣ್ಣದಲೋಕ; ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

             ಪಣಜಿ: ಭಾರತದ 52ನೆಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾದಲ್ಲಿ ಚಾಲನೆ ಸಿಕ್ಕಿದ್ದು, ಜಗಮಗಿಸುವ ಬಣ್ಣದ ಲೋಕ ಅನಾವರಣಗೊಂಡಿದೆ. ವಿಶೇಷವೆಂದರೆ ಈ ಸಲದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜತೆಗೇ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಕೂಡ ನಡೆಯಲಿದೆ.

            ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಸಂದರ್ಭದಲ್ಲಿ ಮಾತನಾಡುತ್ತ, ಚಲನಚಿತ್ರೋತ್ಸವದ ಮೂಲಕ ಹಲವಾರು ಸಾಮಾಜಿಕ ಹಾಗೂ ಸಾಂಸ್ಕೃತಿಕ ನೈತಿಕತೆ ಅರಿಯಲು ಸಾಧ್ಯ ಎಂದು ಹೇಳಿದ ಅವರು, ಸಿನಿಮಾ ಕ್ಷೇತ್ರದಿಂದ 75 ಯುವ ಸೃಜನಶೀಲ ಪ್ರತಿಭಾವಂತರಿಗೆ ವಿಶೇಷ ಅವಕಾಶ ಕೊಡುವ ಯೋಜನೆ ಕುರಿತು ಪ್ರಸ್ತಾಪಿಸಿದರು.

             ಡ್ರೀಮ್​ ಗರ್ಲ್ ಎಂದೇ ಹೆಸರಾಗಿರುವ ಖ್ಯಾತ ನಟಿ ಹಾಗೂ ಸಂಸದೆ ಕೂಡ ಆಗಿರುವ ಹೇಮಮಾಲಿನಿ ಅವರಿಗೆ ಇಂಡಿಯನ್ ಫಿಲ್ಮ್​ ಪರ್ಸನಾಲಿಟಿ ಆಫ್ ದ ಇಯರ್-2021 ಪ್ರಶಸ್ತಿ ನೀಡಲಾಯಿತು.

          ಹಲವಾರು ಮೊದಲುಗಳಿಗೂ ಈ ಸಲದ ಚಿತ್ರೋತ್ಸವ ಸಾಕ್ಷಿಯಾಗಿದೆ. ಮೊದಲ ಬಾರಿಗೆ ಈ ಸಿನಿಮೋತ್ಸವದಲ್ಲಿ ಬ್ರಿಕ್ಸ್ ಪಾಲ್ಗೊಳ್ಳುತ್ತಿದೆ. ಅಂದರೆ ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕ (BRICS) ಸಿನಿಮಾಗಳು ಈ ಸಲದ ಉತ್ಸವದಲ್ಲಿ ಇರಲಿವೆ. ಅಲ್ಲದೆ ಈ ಸಲ ಒಟಿಟಿಗೂ ಅವಕಾಶವಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ತಿಳಿಸಿದ್ದಾರೆ.

           ಕೋವಿಡ್​ ಕರಿಛಾಯೆಯ ನಡುವೆಯೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ತನ್ನ ಹೊಳಲು ಕಳೆದುಕೊಂಡಿಲ್ಲ. ಕಳೆದ ಸಲ 69 ದೇಶಗಳಿಂದ ಸಿನಿಮಾಗಳು ಬಂದಿದ್ದರೆ ಈ ಸಲ 96 ದೇಶಗಳಿಂದ 624 ಸಿನಿಮಾಗಳು ಬಂದಿವೆ. ಅದರಲ್ಲೂ ಭಾರತದ 18 ಭಾಷೆಗಳ 44 ಚಿತ್ರಗಳು ಇಂಡಿಯನ್ ಪನೋರಮಾದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries