ಪಾಲಕ್ಕಾಡ್: ಆರ್‍ಎಸ್‍ಎಸ್ ತೇನಾರಿ ಕ್ಷೇತ್ರದ ಬೌದ್ಧಿಕ್ ಪ್ರಮುಖ್ ಸಂಜಿತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಡಿಪಿಐ ಕೇಂದ್ರಗಳಲ್ಲಿ ವ್ಯಾಪಕ ಶೋಧ ನಡೆಸಲು ಪೋಲೀಸರು ಸಿದ್ಧತೆ ನಡೆಸಿದ್ದಾರೆ. ಉತ್ತರ ವಲಯ ಐಜಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆರೋಪಿಗಳಲ್ಲಿ ಒಬ್ಬನ ರೇಖಾಚಿತ್ರವನ್ನು ಪೋಲೀಸರು ಬಿಡುಗಡೆ ಮಾಡುತ್ತಾರೆ. ಆರೋಪಿಗಳು ಚಲಾಯಿಸುತ್ತಿದ್ದ ಕಾರಿನ ವಿವರವನ್ನೂ ಪೋಲೀಸರು ಸಂಗ್ರಹಿಸಿದ್ದಾರೆ. ಪೋಲೀಸರು ಕಾರಿನ ದೃಶ್ಯಾವಳಿಗಳನ್ನು ಸಹ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಕೊಲೆ ನಡೆದು ಎರಡು ದಿನ ಕಳೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೋಲೀಸರು ವಿಫಲರಾಗಿದ್ದಾರೆ.
ಈಗಾಗಲೇ ಜಿಲ್ಲೆಯ ವಿವಿಧೆಡೆಯ ಹಲವಾರು ಎಸ್‍ಡಿಪಿಐ ಕಾರ್ಯಕರ್ತರನ್ನು ವಿಚಾರಣೆಗೊಳಪಡಿಸಲಾಗಿದ್ದು, ಯಾವುದೇ ಮಹತ್ವದ ಸುಳಿವು ಸಿಕ್ಕಿಲ್ಲ. ಪ್ರಮುಖ ನಾಯಕರನ್ನೂ ವಿಚಾರಣೆಗೆ ಒಳಪಡಿಸಲು ತನಿಖಾ ತಂಡ ನಿರ್ಧರಿಸಿದೆ. ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಪೋಲೀಸರ ಮೇಲೆ ಒತ್ತಡ ಹೇರಿದೆ.
ಪಾಲಕ್ಕಾ ಕಣ್ಣಾನೂರಿನಲ್ಲಿ ಲಭಿಸಿವ ಕೊಲೆಗೆ ಬಳಸಿರಬಹುದಾದ ವಸ್ತುಗಳ ವೈಜ್ಞಾನಿಕ ಪರೀಕ್ಷೆಯ ಫಲಿತಾಂಶ ಇನ್ನಷ್ಟೇ ಹೊರಬೀಳಬೇಕಿದೆ. ಮನ್ನಾಕ್ರ್ಕಾಡ್ ಕೂಟ್ಟಿಲಕ್ಕಡವು ಪೋಂಪ್ರಾದಲ್ಲಿ ಪತ್ತೆಯಾದ ಮಾರಕ ಆಯುಧಗಳನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.
ಸೋಮವಾರ ಬೆಳಗ್ಗೆ ಸಂಜಿತ್ ತನ್ನ ಪತ್ನಿಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಎಸ್ ಡಿಪಿಐ ಕಾರ್ಯಕರ್ತರು ಎಂದು ಸಂಶಯಿಸಲಾದ ವ್ಯಕ್ತಿಗಳು ಹತ್ಯೆ ಮಾಡಿದ್ದರು. ಕಾರಿನಲ್ಲಿ ಬಂದ ಐವರ ತಂಡ ವಾಹನಕ್ಕೆ ಡಿಕ್ಕಿ ಹೊಡೆದು ನೆಲಕ್ಕುರುಳಿಸಿ ಕೊಲೆಗೈದಿದ್ದಾರೆ. ಸಂಜಿತ್ ತಲೆಗೆ 31 ಇರಿದ ಗಾಯಗಳಾಗಿವೆ.

