ಕಾಸರಗೋಡು: ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಸಂಸ್ಮರಣೆ ಯೊಂದಿಗೆ ಜಿಲ್ಲಾ ಪೆÇ್ರಬೇಷನ್ ಪಕ್ಷಾಚರಣೆಗೆ ಚಾಲನೆ ನೀಡಲಾಯಿತು. ಜಿಲ್ಲಾ ಪೆÇ್ರಬೇಷನ್ ಕಚೇರಿ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಜಂಟಿ ವತಿಯಿಂದ ಪಕ್ಷಾಚರಣೆ ಜರುಗುತ್ತಿದೆ. ಜಿಲ್ಲಾ ಜುಡೀಶಿಯಲ್ ಮೆಜಿಸ್ಟ್ರೇಟ್ ಉಣ್ಣಿಕೃಷ್ಣನ್ ಕೆ.ಜಿ. ಸಂಸ್ಮರಣಾ ಭಾಷಣ ಮಾಡಿದರು. ಕುಟುಂಬ ನ್ಯಾಯಾಲಯ
ನ್ಯಾಯಾಧೀಶ ಟಿ.ಕೆ. ರಮೇಶ್ ಕುಮಾರ್ ಪ್ರಧಾನ ಭಾಷಣ ಮಾಡಿದರು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉಣ್ಣಿಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಿಚಾರಗಳಲ್ಲಿ ನ್ಯಾಯಾಧೀಶರಾದ ಸುಹೈಬ್ ಎಂ., ಬಿಜು ಟಿ., ರಂಜಿತ್ ಇ., ವಂದನ ಆರ್., ಏಂಜಲ್ ರೋಸ್ ಜೋಸ್, ದಿನೇಶ್ ಕುಮಾರ್, ಫರೀದಾ ಮಜೀದ್ ಮೊದಲಾದವರು ತರಗತಿ ನಡೆಸಿದರು. ಮುಂದಿನ ದಿನಗಳಲ್ಲಿ ಪಕ್ಷಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

