ಕಾಸರಗೋಡು: ಆರೋಗ್ಯಕ್ಕೆ ಮಾರಕವಾಗುತ್ತಿರುವ ಪಾನೀಯಗಳಿಂದ ಮುಕ್ತಿ ನೀಡಿ, ಆರೋಗ್ಯದಾಯಕ ಎಳನೀರು ಜನರಿಗೆ ಲಭ್ಯವಾಗಿಸುವಂತೆ ಮಾಡಲು ಅಜನೂರ್ ಗ್ರಾಮ ಪಂಚಾಯಿತಿಯಲ್ಲಿ ಎಳನೀರು ಪಾರ್ಲರ್‍ಗೆ ಚಾಲನೆ ನೀಡಲಾಯಿತು.
ಕೇರಳ ಕೃಷಿ ಅಭಿವೃದ್ಧಿ-ಕೃಷಿಕ ಕಲ್ಯಾಣ ಇಲಾಖೆ, ಅಜನೂರ್ ಗ್ರಾಪಂ, ಕೃಷಿಭವನ, ಕೇರ ಸಮಿತಿ ವತಿಯಿಂದ ಪಂಚಾಯಿತಿಯ ಮಡಿಯನ್ ಎಂಬಲ್ಲಿ ಎಳನೀರು ಪಾರ್ಕ್ ಆರಂಭಿಸಲಾಗಿದೆ. ಎಳನೀರು ಪಾರ್ಕ್‍ಗೆ ಅಗತ್ಯವಿರುವ ಎಳನೀರನ್ನು ಅಜನೂರ್ ಪಂಚಾಐಇತಿ ವ್ಯಾಪ್ತಿಯ ಕೃಷಿಕರಿಂದ ಪಡೆದು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಳನೀರು ಜ್ಯೂಸ್ ಜತೆಗೆ ಕ್ವಾಶ್, ಜಾಮ್, ತೆಂಗಿನ ಹಾಲು ಒಳಗೊಂಡ ಮೌಲ್ಯವರ್ಧಿತ ಉತ್ಪನ್ನಗಳನ್ನು ಪಾರ್ಲರ್‍ನಲ್ಲಿ ಮಾರಾಟ ನಡೆಸಲಾಗುವುದು. ಜತೆಗೆ ಪಂಚಾಯಿತಿ ವ್ಯಾಪ್ತಿಯ ಕುಟುಂಬಶ್ರೀ ಘಟಕಗಳ ಕೆಲವೊಂದು ಉತ್ಪನ್ನಗಳನ್ನೂ ಮಾರಾಟ ಮಾಡಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಪಂಚಾಯಿತಿ ಕೇರ ಗ್ರಾಮ ಅಧ್ಯಕ್ಷ ಸಿ.ಬಾಲಕೃಷ್ಣನ್ ತಿಳಿಸಿದ್ದಾರೆ.

