ಕಾಸರಗೋಡು: ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ನ.18ರಂದು ಕಾಸರಗೋಡು ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಬೆಳಗ್ಗೆ 9 ಗಂಟೆಗೆ ಉಕ್ಕಿನಡ್ಕದ ಕಾಸರಗೋಡು ಸರ್ಕಾರಿ ಮೆಡಿಕಲ್ ಕಾಲೇಜಿಗೆ ಅವರು ಭೇಟಿ ನೀಡುವರು. 10 ಗಂಟೆಗೆ ಟಾಟಾ ಕೋವಿಡ್ ಆಸ್ಪತ್ರೆ ಸಂದರ್ಶಿಸುವರು. 11.30ಕ್ಕೆ ಮೆಡಿಕಲ್ ಕಾಲೇಜು ಸಂಬಂಧ ಸಭೆ ಕಾಞಂಗಾಡು ಎಚ್.ಎಂ.ಆಫೀಸ್ ನಲ್ಲಿ ನಡೆಯಲಿದ್ದು, ಅವರು ಭಾಗವಹಿಸುವರು. ಮಧ್ಯಾಹ್ನ 12.30ಕ್ಕೆ ಕಾಞಂಗಾಡು ಎಚ್.ಎಂ.ಸಭಾಂಗಣದಲ್ಲಿ ನಡೆಯುವ ಕೋವಿಡ್ ನಿಯಂತ್ರಣ ಸಭೆಯಲ್ಲಿ ಅವರು ಭಾಗವಹಿಸುವರು.

