ತಿರುವನಂತಪುರ: ಕೆ.ಎಸ್.ಇ.ಬಿ. ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಗ್ರಾಹಕರು ಆಧಾರ್ ಸಂಖ್ಯೆ ನೀಡದ ಕಾರಣ ನಿನ್ನೆ (ಭಾನುವಾರ) ಮಧ್ಯರಾತ್ರಿಯೊಳಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಹುಸಿ ಸಂದೇಶ ಹಬ್ಬಿಸಲಾಗಿತ್ತು. ಕೆಎಸ್ ಇಬಿ ಅಧಿಕಾರಿಗಳು ಇಂತಹ ಸುಳ್ಳು ಪ್ರಚಾರಕ್ಕೆ ಮೋಸ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದಿರುವರು.
ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಎಂಬ ವದಂತಿ ಹರಡಿದ್ದರಿಂದ ಗಾಬರಿಗೊಂಡ ಹಲವರು ಕೆಎಸ್‍ಇಬಿಯ ಗ್ರಾಹಕ ಸೇವಾ ಕೇಂದ್ರದಲ್ಲಿ ದೂರು ದಾಖಲಿಸಿದ್ದರು. ಇದರೊಂದಿಗೆ ಕೆಎಸ್‍ಇಬಿಯೇ ಬಂದು ಪ್ರಚಾರ ಹುಸಿಯಾಗಿದೆ ಎಂದು ಮಾಹಿತಿ ನೀಡಿದೆ.




