ಕೋಝಿಕ್ಕೋಡ್: ಹಲಾಲ್ ಬೋರ್ಡ್ ಹಾಕಿರುವ ಆಹಾರದಲ್ಲಿ ಉಗುಳುವುದಿಲ್ಲ ಎಂದು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.
ಮುಸ್ಲಿಮರು ನಡೆಸುವ ಹೋಟೆಲ್ ಗಳಲ್ಲಿ ಮಾತ್ರ ಹಲಾಲ್ ಬೋರ್ಡ್‍ಗಳನ್ನು ಹಾಕಲಾಗುತ್ತದೆ. ಆದರೆ ಈ ಬೋರ್ಡ್ ಇಲ್ಲದೆ ಕಾರ್ಯನಿರ್ವಹಿಸುವ ಅನೇಕ ಹೋಟೆಲ್‍ಗಳು ರಾಜ್ಯದÀಲ್ಲಿವೆ. ಹಲಾಲ್ ಬೋರ್ಡ್‍ನಲ್ಲಿ ಎಲ್ಲಿಯೂ ಉಗುಳುವ ಆಹಾರವನ್ನು ನೀಡಲಾಗುವುದಿಲ್ಲ. ಮುಸ್ಲಿಮರು ನಡೆಸುವ ಹೋಟೆಲ್‍ಗಳಲ್ಲಿ ಕೆಲಸ ಮಾಡುವ ಮುಸ್ಲಿಮೇತರರೂ ಇದ್ದಾರೆ. ಅವರನ್ನು ಕೇಳಿದರೆ ಸತ್ಯಾಂಶ ತಿಳಿಯಬಹುದು ಎಂದು ಕಾಂತಪುರಂ ಹೇಳಿರುವರು. ಕೆಲವರು ವಿವಾದಗಳ ಮೂಲಕ ಕೋಮುವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಕಾಂತಪುರಂ ಹೇಳಿದರು.
ಮೊನ್ನೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಹಲಾಲ್ ಆಹಾರವನ್ನು ಸಮರ್ಥಿಸಿ ಹೇಳಿಕೆ ನೀಡಿದ್ದರು. ಹಲಾಲ್ ಎಂದರೆ ಬಳಸಲು ಯೋಗ್ಯವಾದುದು. ಹಾಗಾಗಿ ಬೇರೆ ತೊಂದರೆಗಳಿಲ್ಲ ಎಂದು ಪಿಣರಾಯಿ ಹೇಳಿಕೆ ನೀಡಿದ್ದರು.




