ಕೊಚ್ಚಿ; ವಿನಾಯಕ ದಾಮೋದರ್ ಸಾವರ್ಕರ್ ಒಬ್ಬ ಕ್ರಾಂತಿಕಾರಿ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಸಾವರ್ಕರ್ ಅವರ ಚಿಂತನೆಯು ರಾಷ್ಟ್ರದ ಅಭಿವೃದ್ಧಿ ಮತ್ತು ಜನರ ಐಕ್ಯತೆಯ ಗುರಿಯನ್ನು ಹೊಂದಿತ್ತು. ಇದನ್ನು ಎಂದಿಗೂ ಮರೆಯಬಾರದು ಎಂದು ವಿರೋಧಿಗಳಿಗೆ ಆರಿಫ್ ಮೊಹಮ್ಮದ್ ಖಾನ್ ನೆನಪಿಸಿದರು. ಮಾಹಿತಿ ಆಯುಕ್ತ ಉದಯ್ ಮಹೂರ್ಕರ್ ಅವರು ಬರೆದಿರುವ ಸಾವರ್ಕರ್ ಅವರ ಪುಸ್ತಕವನ್ನು ಬಿಡುಗಡೆ ಮಾಡಿ ರಾಜ್ಯಪಾಲರು ಮಾತನಾಡಿದರು.
ಗಾಂಧೀಜಿಯವರಿಗಿಂತ ಮೊದಲು ಸಾವರ್ಕರ್ ಅಸ್ಪೃಶ್ಯತೆಯನ್ನು ವಿರೋಧಿಸಿದ ನಾಯಕರಾಗಿದ್ದರು. ತಾನು ಬದುಕಿದ ಕಾಲಘಟ್ಟದ ಸಮಸ್ಯೆಗಳಿಗೆ ದಿಟ್ಟತನದಿಂದ ಸ್ಪಂದಿಸಿದ ವ್ಯಕ್ತಿ. ಸಾವರ್ಕರ್ ಅವರ ನಿಲುವು ಯಾವುದೇ ವಿಭಾಗದ ವಿರುದ್ಧವಾಗಿರಲಿಲ್ಲ. ಅವರ ವಿರೋಧಿಗಳು ಕೂಡ ಅವರು ಕ್ರಾಂತಿಕಾರಿ ಎಂದು ಒಪ್ಪಿಕೊಂಡಿದ್ದರು.
ನಾವು ಒಬ್ಬ ವ್ಯಕ್ತಿಯನ್ನು ವಿರೋಧಿಸುವಾಗ ಅವನ ಬಗ್ಗೆ ಎಲ್ಲವನ್ನೂ ಅರ್ಥಮಾಡಿಕೊಳ್ಳಬೇಕು. ಅವರು ರಾಷ್ಟ್ರದ ಅಭಿವೃದ್ಧಿ ಮತ್ತು ಜನರ ಐಕ್ಯತೆಗೆ ಶ್ರಮಿಸಿದರು. ಸಾವರ್ಕರ್ ವಿರುದ್ಧ ಮಾತನಾಡುವವರು ಅವರೊಬ್ಬ ಕ್ರಾಂತಿಕಾರಿ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದರು.




