ತಿರುವನಂತಪುರ: ಕೊರೊನಾ ವೈರಸ್‍ನ ಹೊಸ ರೂಪಾಂತರವಾದ ಓಮಿಕ್ರಾನ್ ವಿರುದ್ಧ ರಾಜ್ಯದಲ್ಲಿ ಹೈ ಅಲರ್ಟ್ ಇದೆ. ಇಂದು ನಡೆಯಲಿರುವ ಕೊರೊನಾ ತಜ್ಞರ ಸಮಿತಿ ಸಭೆಯಲ್ಲಿ ಪರಿಸ್ಥಿತಿ ಅವಲೋಕಿಸಲಾಗುವುದು. ಓಮಿಕ್ರಾನ್ ವಿವಿಧ ದೇಶಗಳಲ್ಲಿ ವರದಿಯಾಗಿದ್ದರಿಂದ ಕೇರಳವೂ ತನ್ನ ಜಾಗರೂಕತೆಯನ್ನು ಹೆಚ್ಚಿಸಿದೆ. ಕೇರಳವು ಕಳೆದ ಮೂರು ತಿಂಗಳಿನಿಂದ ಅತಿ ಹೆಚ್ಚು ದೈನಂದಿನ ಕೋವಿಡ್ ಸೋಂಕು ಮತ್ತು ಮರಣ ಪ್ರಮಾಣ ಹೊಂದಿದೆ.
ಹೊರ ರಾಜ್ಯಗಳಿಂದ ಬರುವ ಎಲ್ಲರಿಗೂ 7 ದಿನಗಳ ಕಾಲ ಕ್ವಾರಂಟೈನ್ ಬಿಗಿಗೊಳಿಸುವಂತೆ ಆರೋಗ್ಯ ಇಲಾಖೆ ಜಿಲ್ಲೆಗಳಿಗೆ ಸೂಚಿಸಿದೆ. ಎರಡನೇ ಡೋಸ್ ಲಸಿಕೆಯನ್ನು ತ್ವರಿತಗೊಳಿಸಬೇಕು ಎಂದು ಆರೋಗ್ಯ ತಜ್ಞರು ಒತ್ತಾಯಿಸಿರುವÀರು. ಕೊರೋನಾ ದೃಢೀಕರಣಗಳ ಮಾದರಿಗಳು ಸ್ಥಳೀಯವಾಗಿ ಅನುಕ್ರಮವಾಗಿರಬೇಕು.
ನಿರ್ಗಮನದ ಮೊದಲು, ಆಗಮನದ ನಂತರ ಮತ್ತು ಕ್ವಾರಂಟೈನ್‍ನ ನಂತರ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ನಡೆಸಲು ಸಹ ಶಿಫಾರಸು ಮಾಡಲಾಗಿದೆ. ಲಸಿಕೆಯನ್ನು ತ್ವರಿತಗೊಳಿಸಬೇಕು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಪ್ರಸ್ತುತ ರಾಜ್ಯದ ಒಟ್ಟು ಜನಸಂಖ್ಯೆಯ 96 ಶೇ. ಜನರು ಮೊದಲ ಡೋಸ್ ಮತ್ತು 63 ಶೇ. ಎರಡನೇ ಡೋಸ್ ನ್ನು ಸ್ವೀಕರಿಸಿದ್ದಾರೆ. ಇದೇ ವೇಳೆ, ರಾಜ್ಯದಲ್ಲಿ ಎರಡು ಡೋಸ್ ಲಸಿಕೆ ತೆಗೆದುಕೊಳ್ಳದ 1.4 ಮಿಲಿಯನ್ ಜನರಿರುವುದು ಎಂಬ ಅಂಶ ಉಲ್ಲೇಖಾರ್ಹವೂ ಹೌದು.




