ಕಾಸರಗೋಡು: ಕೇರಳದಲ್ಲಿ ಎಡರಂಗ ಸರ್ಕಾರ ಸಂಘಪರಿವಾರ ಕಾರ್ಯಕರ್ತರ ದಮನಕಾರ್ಯ ಕೈಬಿಟ್ಟು, ಉತ್ತಮ ಆಡಳಿತ ನೀಡುವಲ್ಲಿ ಗಮನಹರಿಸುವುದು ಒಳಿತು ಎಂದು ಬಿಜೆಪಿ ಹಿರಿಯ ಮುಖಂಡ, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸಿ.ಕೆ ಪದ್ಮನಾಭನ್ ತಿಳಿಸಿದ್ದಾರೆ.
ಅವರು ಆರೆಸ್ಸೆಸ್ ಮುಖಂಡ, ಪಾಲಕ್ಕಾಡಿನ ಸಂಜಿತ್ ಕೊಲೆ ಪ್ರಕರಣವನ್ನು ಎನ್‍ಐಎಗೆ ವಹಿಸಿಕೊಡುವಂತೆ ಬಿಜೆಪಿ ಜಿಲ್ಲಾಸಮಿತಿಯಿಂದ ಗುರುವಾರ ನಡೆದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಾಡಹಗಲು ಕೊಲೆ ನಡೆದಿದ್ದರೂ, ಕೆಲವು ದಿವಸಗಳ ನಂತರ ಆರೋಪಿಗಳೆನ್ನಲಾದ ಕೆಲವರನ್ನು ಬಂಧಿಸಲಾಗಿದೆ. ಕೊಲೆನಡೆದ ಕೆಲವೇ ತಾಸುಗಳೊಳಗೆ ಕೊಲೆಆರೋಪಿಗಳು ಸಂಚರಿಸಿದ ವಾಹನ ನೆರೆಯ ತಮಿಳ್ನಾಡಿನಲ್ಲಿ ಧ್ವಂಸಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆ ಕೃತ್ಯದ ಹಿಂದೆ ನಿಗೂಢ ಸಂಚು ಅಡಗಿದೆ. ಕೇರಳದಲ್ಲಿ ಪಿಣರಾಯಿ ವಿಜಯನ್ ಸರ್ಕಾರ ಜಿಹಾದಿಗಳೊಂದಿಗೆ ಕೈಜೋಡಿಸಿದ್ದು, ಇವರು ನಡೆಸುವ ದುಷ್ಕøತ್ಯಗಳಿಗೆ ನಿರಂತರ ಬೆಂಬಲ ನೀಡುತ್ತಾ ಬರುತ್ತಿದೆ. ಇಂತಹ ಶಕ್ತಿಗಳ ವಇರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಬಿಜೆಪಿ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವಿ.ಬಾಲಕೃಷ್ಣ ಶೆಟ್ಟಿ, ಎ.ವೇಲಾಯುಧನ್, ವಿಜಯ್‍ಕುಮಾರ್ ರೈ, ಎಂ. ಬಲರಾಜ್, ಪಿ.ರಮೇಶ್, ಸಉಧಾಮ ಗೋಸಾಡ, ರೂಪವಾಣಿ ಆರ್.ಭಟ್, ಎಂ. ಜನನಿ, ಪುಷ್ಪಾ ಅಮೆಕ್ಕಳ, ಪಿ.ಮಧು, ಸೌಮ್ಯಾಮಹೇಶ್, ಉಮಾ ಎಂ ಮುಂತಾದವರು ಪಾಲ್ಗೊಂಡಿದ್ದರು.




