ಕಾಸರಗೋಡು: ಶೇಷವನ ಶ್ರೀ ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರದ ಶೇಷವನಶ್ರೀ ಭಕ್ತಿಕುಸುಮ ಮಧೂರು ಕ್ಷೇತ್ರದ ಪ್ರಧಾನಅರ್ಚಕ ಶ್ರೀಕೃಷ್ಣಉಪಾಧ್ಯಾಯ ಬಿಡುಗಡೆಗೊಳಿಸಿದರು. ನಿವೃತ್ತಕನ್ನಡ ಪಂಡಿತರಾದ ವಿ ಬಿ ಕುಳಮರ್ವ ರಚಿಸಿದ'ಶೇಷವನದಲಿ ನೆಲೆಸಿದ' ಎಂಬ ಹಾಡನ್ನು ಖ್ಯಾತಗಾಯಕಿ ಸಂಗೀತಬಾಲಚಂದ್ರ ಹಾಗೂ ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧಾಪಕ ರತ್ನಾಕರಮಲ್ಲಮೂಲೆ ರಚಿಸಿದ 'ಕರುಣಾಕರನೆ'ಮತ್ತು ಪುರುಷೋತ್ತಮ ಕೊಪ್ಪಲ್ ರಚಿಸಿದ ಹರಹರ ಎಂಬ ಹಾಡನ್ನು ಗಾಯಕ ರವೀಂದ್ರ ಪ್ರಭುಹಾಡಿದರು. ಮೂರು ಗೀತೆಗಳ ಸಂಗೀತ ಸಂಯೋಜನೆಯನ್ನು ಪುರುಷೋತ್ತಮ ಕೊಪ್ಪಲ್ ನಡೆಸಿದ್ದರು. ಸಮಾರಂಭದಲ್ಲಿ ಗೀತೆ ರಚನಾಕಾರರಾದ ವಿ ಬಿ ಕುಲಮರ್ವ,ರತ್ನಾಕರಮಲ್ಲಮೂಲೆ ಹಾಗೂ ಸಂಗೀತ ನೀಡಿದ ಪುರುಷೋತ್ತಮ ಕೊಪ್ಪಲ್ ಅವರನ್ನು ಕ್ಷೇತ್ರದ ವತಿಯಿಂದ ಸ್ಮರಣಿಕೆ ನೀಡಿ ಗೌರ ವಿಸಲಾಯಿತು. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ನ ಆಡಳಿತ ಮೊಕ್ತೇಸರ ಕಿರಣ್‍ಪ್ರಸಾದ್ ಕೂಡ್ಲು ಅಧ್ಯಕ್ಷತೆ ವಹಿಸಿದರು. ಅನುವಂಶಿಕ ಮೊಕ್ತೇಸರ ಸದಾಶಿವ ಉಪಸ್ಥಿತರಿದ್ದರು. ಟ್ರಸ್ಟ್ ನ ಕಾರ್ಯದರ್ಶಿ ವಸಂತ ಸ್ವಾಗತಿಸಿ, ಕೊಶಾಧಿಕಾರಿ ಸುರೇಶ್ ನಾಯ್ಕ್ ವಂದಿಸಿದರು.




