ಮುಳ್ಳೇರಿಯ: ವ್ಯಾಪಕ ಪ್ರಮಾಣದಲ್ಲಿ ಕೃಷಿ ಹಾನಿಗೊಳಿಸುತ್ತಿದ್ದ ಕಾಡುಹಂದಿಯನ್ನು ಕೊನೆಗೂ ಅರಣ್ಯಾಧಿಕಾರಿಗಳ ನಿರ್ದೇಶಾನುಸಾರ ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ.
ಮುಳಿಯಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋವಿಕ್ಕಾನ, ಮುಳಿಯಾರು, ಆಲೂರು ಮೊದಲಾದೆಡೆ ಇತ್ತೀಚೆಗೆ ಕಾಡುಹಂದಿಗಳ ಉಪಟಳ ತೀವ್ರ ಸ್ವತೂಪ ಪಡೆದಿದಸ್ದು ಭಾರೀ ಪ್ರಮಾಣದ ಕೃಷಿ ಹಾನಿಗೆ ಕಾರಣವಾಗುತ್ತಿವೆ. ಈ ಬಗ್ಗೆ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಹಂದಿಯ ಚಲನವಲನಗಳ ಬಗ್ಗೆ ನಿಗಾ ಇರಿಸಿತ್ತು. ಜಿಲ್ಲಾ ಅರಣ್ಯಾಧಿಕಾರಿ ಸೊಲೊಮನ್ ಜಾರ್ಜ್ ಅವರ ಸೂಚನೆಯ ಮೇರೆಗೆ ಬುಧವಾರ ನಸುಕಿನ ವೇಳೆ ಅರಣ್ಯ ಇಲಾಖೆಯ ಕಣ್ಗಾವಲಿನಲ್ಲಿ ಹಸನ್ ಆಲೂರಿನ ಜಮೀನಿನಲ್ಲಿ ಹಂದಿ ಕಾಣಿಸಿಕೊಂಡಿದ್ದು, ಬಿ.ಅಬ್ದುಲ್ ಗಫೂರ್ ನೇತೃತ್ವದ ತಂಡ ಗುಂಡಿಟ್ಟು ಹತ್ಯೆ ಮಾಡಿದೆ. ಮರಣೋತ್ತರ ಪರೀಕ್ಷೆಯ ನಂತರ ತಂಡವು ಸಂಸ್ಕರಿಸಿತು. ವಲಯ ಅರಣ್ಯಾಧಿಕಾರಿ ಎನ್.ವಿ.ಸತ್ಯನ್, ಬೀಟ್ ಅರಣ್ಯಾಧಿಕಾರಿ ರಾಜೇಶ್, ಲೋಕೋಪಯೋಗಿ ವಿಭಾಗದ ಜಿಜಿನ್ ಚಂದ್ರನ್, ಅರಣ್ಯ ಇಲಾಖೆ ನೌಕರರಾದ ಬಿ ಅಬ್ದುಲ್ರಹ್ಮಾನ್, ಸನಲ್, ಲೈಜು, ಬಿಜಿತ್ ನೇತೃತ್ವ ವಹಿಸಿದ್ದರು.




