ಬದಿಯಡ್ಕ: ಎಡನೀರು ಸ್ವಾಮೀಜಿಸ್ ಎನ್.ಎಸ್.ಎಸ್. ಯೂನಿಟ್ ನೇತೃತ್ವದಲ್ಲಿ ರಕ್ತದಾನ ಶಿಬಿರ ಜರುಗಿತು. ಕಾಸರಗೋಡು ಎನ್ ಫೆÇೀರ್ಸ್ ಮೆಂಟ್ ಆರ್.ಡಿ.ಒ.ಎಂ.ಡಿ.ಡೇವಿಸ್ ಉದ್ಘಾಟಿಸಿದರು. ಚಟ್ಟಂಚಾಲ್ ಶಾಲಾ ಪ್ರಾಂಶುಪಾಲ ರತೀಶ್ ಕುಮಾರ್, ಸಹಾಯಕ ಮೋಟಾರು ವಾಹನ ಇನ್ಸ್ ಪೆಕ್ಟರ್ ಜಯರಾಜ್ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಪ್ರಾಂಶುಪಾಲ ಎ.ಎನ್.ನಾರಾಯಣನ್ ಅಧ್ಯಕ್ಷತೆ ವಹಿಸಿದ್ದರು. ಚೆಂಗಳ ಗ್ರಾಮ ಪಂಚಾಯತ್ ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಸಲೀಂ ಎಡನೀರು, ಎನ್.ಎಸ್.ಎಸ್. ಪ್ರೊಗ್ರಾಂ ಅಧಿಕಾರಿ ಎ.ಮಧುಸೂದನನ್, ಸೂರ್ಯಾ ಸುರೇಶ್ ಉಪಸ್ಥಿತರಿದ್ದರು. 77 ಬಾರಿ ರಕ್ತದಾನ ನಡೆಸಿರುವ ಶಾಲಾ ಪ್ರಾಂಶುಪಾಲ ರತೀಶ್ ಕುಮಾರ್ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.




