HEALTH TIPS

ಆಜಾದಿ ಕಾ ಅಮೃತ ಮಹೋತ್ಸವ; ಕಯ್ಯೂರಿನಲ್ಲಿ ಸ್ವಾತಂತ್ರ್ಯ ಹೋರಾಟ ಸಂದೇಶದೊಂದಿಗೆ ಸ್ಮೃತಿ ಯಾತ್ರೆ ಸಮಾಪನ

  

               ಕಾಸರಗೋಡು: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಕಾಸರಗೋಡಿನ ಮಣ್ಣನ್ನು ಅನ್ವೇಷಿಸಲು ವಿದ್ಯಾರ್ಥಿಗಳ ಎರಡು ದಿನಗಳ ಯಾತ್ರೆ ಮುಕ್ತಾಯಗೊಂಡಿತು. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸ್ಮೃತಿ ಯಾತ್ರೆ ಚಿರಸ್ಮರಣ ಕಾರ್ಯಕ್ರಮದಲ್ಲಿ ಆಯ್ದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

                     ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈ ಅವರ ಸ್ಮಾರಕ ಗಿಳಿವಿಂಡಿನಲ್ಲಿ  ಶನಿವಾರ ಆರಂಭವಾದ ಸಂದೇಶ ಸ್ಮೃತಿ ಯಾತ್ರೆ  ಭಾನುವಾರ ಎಸಿಕೆ ಭವನ, ಮಡಿಕೈ ಎಚ್ಚಿಕ್ಕಾನಂ ತರವಾಡು, ನೀಲೇಶ್ವರ ರಾಜಾಸ್, ಕುಟ್ಟಮ್ಮತ್ ಭವನ ಮತ್ತು ಟಿಎಸ್ ತಿರುಮುಂಪ್ ಭವನಕ್ಕೆ ಭೇಟಿ ನೀಡಿತು.  ಕೆಯ್ಯೂರು ಹುತಾತ್ಮರ ಮಂಟಪ ಅಪ್ಪು (ಹುತಾತ್ಮರ ಭವನ)ದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸಿದರು. ಕೈಯೂರು ಚೀಮೇನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ.ವತ್ಸಲನ್, ಉಪಾಧ್ಯಕ್ಷೆ ಶಾಂತಾ, ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಡಯಟ್ ಪ್ರಾಂಶುಪಾಲ ಡಾ.ಎಂ.ಬಾಲನ್, ಸರ್ವಶಿಕ್ಷ ಣ ಕೇರಳ ಡಿಪಿಸಿ ರವೀಂದ್ರನ್, ಕೈಟ್ ಜಿಲ್ಲಾ ಸಂಯೋಜಕ ಪಿ.ಸಿ.ರಾಜೇಶ್, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಎಂ.ಮಧುಸೂದನನ್, ಕಾಞಂಗಾಡು ಜಿಲ್ಲಾ ಶಿಕ್ಷಣಾಧಿಕಾರಿ ಭಾಸ್ಕರನ್ ಚೆರುವತ್ತೂರು, ಕೆ.ಜಿ. ಸನಲ್ ಶಾ ಮತ್ತು ಶ್ಯಾಮಲಾ ವಿದ್ಯಾರ್ಥಿಗಳಿಗೆ ಉಡುಗೊರೆ ವಿತರಿಸಿದರು. ವಿದ್ಯಾರ್ಥಿ ಪ್ರತಿನಿಧಿ ದಿಲ್ಶಾ ಸಿಜಿ ವಂದಿಸಿದರು.  ಕೈಯೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಕೈಯೂರು ಎಎಲ್ ಪಿ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಸಂಗೀತವನ್ನು ಹಾಡಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರೈತ ಹೋರಾಟದ ನೇತೃತ್ವ ವಹಿಸಿ ಹುತಾತ್ಮರಾದ ಕೈಯೂರು ಹೋರಾಟಗಾರರ ಸ್ಮಾರಕಕ್ಕೂ ವಿದ್ಯಾರ್ಥಿಗಳು ಭೇಟಿ ನೀಡಿದರು.

                    ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರು ಎಸಿಕೆ ಭವನ ಮತ್ತು ಮಡಿಕೈ ಎಚಿಕ್ಕನಂ ತರವಾಡದಲ್ಲಿ ನಡೆದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿದರು. ಇತಿಹಾಸ ತಜ್ಞ ಪ್ರಾಧ್ಯಾಪಕ ವಿ ಕುಟ್ಟನ್ ಉಪನ್ಯಾಸ ನೀಡಿದರು. ಮಡಿಕೈ ಪಂಚಾಯಿತಿ ಅಧ್ಯಕ್ಷೆ ಎಸ್.ಪ್ರೀತಾ ಅಧ್ಯಕ್ಷತೆ ವಹಿಸಿದ್ದರು.ಗ್ರಾಮ ಪಂಚಾಯಿತಿ ಸದಸ್ಯರು ಮಾತನಾಡಿದರು. ಮುಖ್ಯ ಭಾಷಣವನ್ನು ನೀಲೇಶ್ವರ ಮುನ್ಸಿಪಲ್ ಕಾಪೆರ್Çರೇಶನ್‍ನ ಮಾಜಿ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್ ಮತ್ತು ಕಣ್ಣೂರು ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕಿ ಡಾ.ಮಾಯಾ ಅವರು ಮಾತನಾಡಿದರು. ನೀಲೇಶ್ವರ ನಗರಸಭೆಯಲ್ಲಿ  ಅಧ್ಯಕ್ಷೆ ಎಸ್‍ಟಿವಿ ಶಾಂತಾ ಉದ್ಘಾಟಿಸಿದರು. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದಾಕ್ಷಾಯಣಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮುಹಮ್ಮದ್ ರಫಿ ಹಾಗೂ ಪುರಸಭಾ ಸದಸ್ಯರು ಮಾತನಾಡಿದರು.ಕುಟ್ಟಮತ್ ಸ್ಮಾರಕದಲ್ಲಿ ಡಾ.ಪಿ.ವಿ.ಕೃಷ್ಣ ಕುಮಾರ್ ಮುಖ್ಯ ಭಾಷಣ ಮಾಡಿದರು. ವಿನೋದ್ ಕುಟ್ಟಮತ್ ಮಾತನಾಡಿದರು. ಪಿಲಿಕೋಡಿನ ಟಿ.ಎಸ್.ತಿರುಮುಂಪ್ ಸ್ಮಾರಕದಲ್ಲಿ ಪಂಚಾಯಿತಿ ಅಧ್ಯಕ್ಷ ಪ್ರಸನ್ನ ಮಾತನಾಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries