HEALTH TIPS

ಅಂಕಲ್ ಅಂದಿದ್ದಕ್ಕೇ 18ರ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ!

        ಡೆಹ್ರಾಡೂನ್: ಅಂಕಲ್ ಅಂದಿದ್ದಕ್ಕೇ 18ರ ಯುವತಿಗೆ ಅಂಗಡಿ ಮಾಲೀಕನೋರ್ವ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

         ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಸಿತಾರ್‌ಗಂಜ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಅಂಕಲ್ ಎಂದು ಕರೆದಿದ್ದಕ್ಕೆ ನಿಶಾ ಅಹ್ಮದ್ ಎಂಬ 18 ವರ್ಷದ ಯುವತಿಗೆ 35 ವರ್ಷದ ಅಂಗಡಿ ಮಾಲೀಕ ಥಳಿಸಿದ್ದಾನೆ. ಹಲ್ಲೆಗೊಳಗಾದ ಯುವತಿ ತಲೆಗೆ ತೀವ್ರ ಪೆಟ್ಟಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

          ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, ಆರೋಪಿಯನ್ನು ಮೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ. ಅಂತೆಯೇ ಐಪಿಸಿ ಸೆಕ್ಷನ್ 354, ಸೆಕ್ಷನ್ 323, ಸೆಕ್ಷನ್ 506 ಕ್ರಿಮಿನಲ್ ಬೆದರಿಕೆ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

            ಘಟನೆಯ ಕುರಿತಂತೆ ಪ್ರತಿಕ್ರಿಯಿಸಿದ ಎಸ್‍ಎಚ್‍ಒ, ಯುವತಿ ಡಿಸೆಂಬರ್ 19 ರಂದು ಬ್ಯಾಡ್ಮಿಂಟನ್ ರಾಕೆಟ್ ಖರೀದಿಸಿದ್ದಳು. ಮಂಗಳವಾರ ಅದನ್ನು ಬದಲಾಯಿಸಿಕೊಳ್ಳಲು ಹೋಗಿದ್ದಳು. ರಾಕೆಟ್ ನ ಕೆಲವು ತಂತಿಗಳು ಮುರಿದು ಹೋಗಿದ್ದವು. ಈ ವೇಳೆ ಅಂಗಡಿಯವನನ್ನು ಯುವತಿ ಅಂಕಲ್ ಎಂದು ಕರೆದಿದ್ದಾಳೆ. ಇಷ್ಟಕ್ಕೆ ರೊಚ್ಚಿಗೆದ್ದ ಮೋಹಿತ್ ಯುವತಿಗೆ ಅಮಾನುಷವಾಗಿ ಥಳಿಸಿದ್ದಾನೆ. ಇದೀಗ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೇ ಈ ಘಟನೆ ಸಂಬಂಧ ಯುವತಿ ತಂದೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries