ನವದೆಹಲಿ: ವೆಜಿಟೇಬಲ್ ಬಿರಿಯಾನಿಗಿಂತ ಚಿಕನ್ ಬಿರಿಯಾನಿ ರುಚಿಯೇ ಅಥವಾ ಇಲ್ಲವೇ ಎಂಬ ಚರ್ಚೆ ಮಾಡಿದ್ರೆ, ಈ ಚರ್ಚೆಗೆ ಅಂತ್ಯವೇ ಇರುವುದಿಲ್ಲ ಅನಿಸುತ್ತದೆ. ಏಕೆಂದರೆ ನಾವೆಲ್ಲಾರು ಬಗೆ ಬಗೆಯ ಬಿರಿಯಾನಿಯನ್ನು ಪ್ರೀತಿಸುತ್ತೇವೆ. ಇದಕ್ಕೆ ಉದಾಹರಣೆಯಂತಿದೆ ಸ್ವಿಗ್ಗಿಯ ಆರನೇ ವಾರ್ಷಿಕ ವರದಿ.
ಸ್ವಿಗ್ಗಿಯ ವರದಿಯೂ ಭಾರತೀಯರು ಎಷ್ಟು ಭಕ್ಷ್ಯ ಪ್ರಿಯರು ಎಂಬುದನ್ನು ತೋರಿಸುತ್ತದೆ. ಈ ವರದಿಯ ಪ್ರಕಾರ, ಭಾರತೀಯರು ಪ್ರತಿ ನಿಮಿಷಕ್ಕೆ 115 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರಂತೆ. ಅಂದರೆ, ಪ್ರತಿ ಸೆಕೆಂಡಿಗೆ 2(1.91) ಬಿರಿಯಾನಿಗಳು.
ಅಲ್ಲದೆ ಚಿಕನ್ ಬಿರಿಯಾನಿಯನ್ನು ವೆಜ್ ಬಿರಿಯಾನಿಗಿಂತ 4.3 ಪಟ್ಟು ಹೆಚ್ಚು ಆರ್ಡರ್ ಮಾಡಲಾಗಿದೆಯಂತೆ. ಚೆನ್ನೈ, ಕೊಲ್ಕತ್ತಾ, ಲಖನೌ ಮತ್ತು ಹೈದರಾಬಾದ್‌ನಲ್ಲಿ ಚಿಕನ್ ಬಿರಿಯಾನಿ ಆರ್ಡರ್ ಅನ್ನು ಹೆಚ್ಚು ಆರ್ಡರ್ ಮಾಡಲಾಗಿದೆ.
4.25 ಲಕ್ಷಕ್ಕೂ ಹೆಚ್ಚು ಹೊಸ ಬಳಕೆದಾರರು ಚಿಕನ್ ಬಿರಿಯಾನಿಯನ್ನು ಆರ್ಡರ್ ಮಾಡುವ ಮೂಲಕ ಸ್ವಿಗ್ಗಿಗೆ ಪಾದಾರ್ಪಣೆ ಮಾಡಿದ್ದಾರೆ.
ಕೊಲ್ಕತ್ತಾದ ವ್ಯಕ್ತಿಯೊಬ್ಬರು ತಮ್ಮ ನೆಚ್ಚಿನ ಮಡದಿಗೆ ಇಷ್ಟವಾದ ಮಟನ್ ಬಿರಿಯಾನಿಯನ್ನು ಮನೆಯಿಂದ 39.3 ಕಿಮೀ ದೂರದ ಸ್ವಿಗ್ಗಿ ಜೀನಿಯಿಂದ ಡೆಲಿವರಿ ಮಾಡಿಸಿಕೊಂಡಿದ್ದಾರೆ.
ಈ ವರ್ಷದಲ್ಲಿ ಅತ್ಯಂತ ಹೆಚ್ಚು ಸೇವಿಸಿದ ತಿಂಡಿ ಸಮೋಸಾ ಆಗಿದ್ದು, ಸ್ವಿಗ್ಗಿಯಲ್ಲಿ ಸುಮಾರು 5 ಮಿಲಿಯನ್ ಆರ್ಡರ್‌ಗಳನ್ನು ಮಾಡಲಾಗಿದೆ. ಸ್ವಿಗ್ಗಿ 2021 ರ ವರದಿಯ ಪ್ರಕಾರ, ಸಮೋಸಾವನ್ನು ಚಿಕನ್ ವಿಂಗ್‌ಗಳಿಗಿಂತ 6 ಪಟ್ಟು ಹೆಚ್ಚು ಆರ್ಡರ್ ಮಾಡಲಾಗಿದೆ. ಪಾವ್ ಭಾಜಿಯನ್ನು 2.1 ಮಿಲಿಯನ್ ಆರ್ಡರ್ ಮಾಡುವ ಮೂಲಕ ಭಾರತ ಎರಡನೇ ಸ್ಥಾನದಲ್ಲಿದೆ.

