HEALTH TIPS

ಕೇರಳದ ರಾಷ್ಟ್ರೀಯ ಹೆದ್ದಾರಿಗಳ ಆಧುನೀಕರಣಕ್ಕೆ 100 ಕೋಟಿ ಮಂಜೂರು ಮಾಡಿದ ಕೇಂದ್ರ ಸರ್ಕಾರ: ಟೆಂಡರ್ ಪ್ರಕ್ರಿಯೆ ಶೀಘ್ರ: ಸಚಿವ ಮೊಹಮ್ಮದ್ ರಿಯಾಜ್

                                                   

                ತಿರುವನಂತಪುರ: ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ `97. 15 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಕೇಂದ್ರ ಮೇಲ್ಮೈ ಸಾರಿಗೆ ಸಚಿವಾಲಯದಿಂದ ಅನುಮೋದನೆ ನೀಡಲಾಗಿದೆ ಎಂದು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಸಚಿವ ಪಿ.ಎ.ಮಹಮ್ಮದ್ ರಿಯಾಜ್ ಹೇಳಿದ್ದಾರೆ. ಏಳು ಯೋಜನೆಗಳಿಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆಗಳನ್ನು ಪಡೆಯಲಾಗಿದೆ. ಲೋಕೋಪಯೋಗಿ ಇಲಾಖೆಯ ಶಿಫಾರಸಿನ ಮೇರೆಗೆ ವಾರ್ಷಿಕ ಯೋಜನೆಯಲ್ಲಿ ಹಣ ಸೇರಿಸಲಾಗಿದೆ.

               ಇಡುಕ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ 185 ನ್ನು ಎರಡು ಹಂತಗಳಲ್ಲಿ ನವೀಕರಿಸಲು ಅನುಮತಿ ನೀಡಲಾಗಿದೆ. ವಲ್ಲಕ್ಕಡವು-ಚೆಲಿಮಾಡ ಮಾರ್ಗದ 22.94 ಕಿ.ಮೀ ಅಭಿವೃದ್ಧಿಗೆ `30.32 ಕೋಟಿ ಮಂಜೂರಾಗಿದೆ. ವೆಲ್ಲಯಂಕುಡಿಯಿಂದ ಡಬಲ್ ಕಟಿಂಗ್ ವರೆಗೆ ರಸ್ತೆ ಆಧುನೀಕರಣಕ್ಕೆ 22.44 ಕೋಟಿ ಮಂಜೂರಾಗಿದೆ. ಇಲ್ಲಿ 13.83 ಕಿ.ಮೀ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗುವುದು.

             ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಕುಂದಮಂಗಲದಿಂದ ಮನ್ನಿಲಕಡವುವರೆಗಿನ 10 ಕಿ.ಮೀ ರಸ್ತೆಯ ಆಧುನೀಕರಣಕ್ಕೆ `15.56 ಕೋಟಿ ಮಂಜೂರಾಗಿದೆ. ರಾಷ್ಟ್ರೀಯ ಹೆದ್ದಾರಿ 183ಎಯಲ್ಲಿ ಕೈಪತ್ತೂರು-ಪತ್ತನಂತಿಟ್ಟ ಸೇಂಟ್ ಸ್ಟೀಫನ್ಸ್ ಜಂಕ್ಷನ್ ವರೆಗೆ 9.45 ಕೋಟಿ ರೂ.ಬಿಡುಗಡೆಗೊಂಡಿದೆ. ಇಲ್ಲಿ 5.64 ಕಿ.ಮೀ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗುವುದು. ಕೋಝಿಕ್ಕೋಡ್ ತಪ್ಪಲಿನಲ್ಲಿರುವ ಎಲಿಕಾಡ್ ಸೇತುವೆಯ ಪುನಶ್ಚೇತನಕ್ಕೆ `65 ಲಕ್ಷ ಮತ್ತು ಎರ್ನಾಕುಳಂ ವೆಲ್ಲಿಂಗ್ಟನ್ ಐಲ್ಯಾಂಡ್-ಕೊಚ್ಚಿ ಬೈಪಾಸ್ ರಸ್ತೆಯ ಮೂರು ಸೇತುವೆಗಳ ಪುನಶ್ಚೇತನಕ್ಕೆ 8.33 ಕೋಟಿ ಮಂಜೂರು ಮಾಡಲಾಗಿದೆ.

               ಎಂಟು ಬ್ಲಾಕ್‍ಸ್ಪಾಟ್‍ಗಳಲ್ಲಿ ಅಗತ್ಯ ನವೀಕರಣಗಳನ್ನು ಕೈಗೊಳ್ಳಲು `10.4 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಮನಾರ್ಕಾಡ್, ಕಂಜಿಕುಳಿ, ಪರತೋಡ್ (ಕಾಂಜಿರಪಳ|ಳಿ), 19ನೇ ಮೈಲ್, ಇರತ್ತುನಾಡ, ವಡವತ್ತೂರು, 14ನೇ ಮೈಲ್ (ಪುಳಿಕ್ಕಲ್ ಜಂಕ್ಷನ್) ಮತ್ತು ಆಲಂಪಲ್ಲಿ ಬ್ಲಾಕ್ ಸ್ಪಾಟ್‍ಗಳಲ್ಲಿ ಕಾಮಗಾರಿ ನಡೆಯಲಿದೆ.

                   ತಾಂತ್ರಿಕ ಅನುಮೋದನೆ ದೊರೆತ ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಸಚಿವ ಪಿ.ಎ.ಮಹಮ್ಮದ್ ರಿಯಾಜ್ ಸೂಚಿಸಿದರು. ನಿಗದಿತ ಸಮಯದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳುವಂತೆ ಸಚಿವರು ಸೂಚಿಸಿದರು. ಇದಕ್ಕೂ ಮುನ್ನ ಕೇಂದ್ರ ಮೇಲ್ಮೈ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಚಿವ ಪಿ.ಎ.ಮೊಹಮ್ಮದ್ ರಿಯಾಜ್ ಕೇರಳದ ಯೋಜನೆಗಳಿಗೆ ಶೀಘ್ರ ಅನುಮೋದನೆ ನೀಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries