HEALTH TIPS

ಕೇರಳದಲ್ಲಿ ಇಂದು 4450 ಮಂದಿ ಜನರಿಗೆ ಕೋವಿಡ್ ಪತ್ತೆ: 57,722 ಮಾದರಿಗಳ ಪರೀಕ್ಷೆ

                                                         

                            ತಿರುವನಂತಪುರಂ: ರಾಜ್ಯದಲ್ಲಿ ಇಂದು 4450 ಮಂದಿ ಜನರಿಗೆ ಕೋವಿಡ್  ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 23 ಮಂದಿ ಮೃತಪಟ್ಟಿದ್ದಾರೆ. ಹೆಚ್ಚಿನ ಮಾಹಿತಿಗಳಿಗೆ ಮುಂದೆ ಓದಿ.....

                 ಇಂದು ತಿರುವನಂತಪುರ 791, ಎರ್ನಾಕುಳಂ 678, ಕೋಝಿಕ್ಕೋಡ್ 523, ಕೊಟ್ಟಾಯಂ 484, ಕೊಲ್ಲಂ 346, ತ್ರಿಶೂರ್ 345, ಕಣ್ಣೂರು 246, ಪತ್ತÀನಂತಿಟ್ಟ 219, ಇಡುಕ್ಕಿ 193, ಮಲಪ್ಪುರಂ 158, ಆಲಪ್ಪುಳ 147, ಪಾಲಕ್ಕಾಡ್ 141, ವಯನಾಡ್ 128, ಕಾಸರಗೋಡು 51 ಎಂಬಂತೆ ಕೋವಿಡ್ ದೃಢಪಡಿಸಲಾಗಿದೆ. 

            ಕಳೆದ 24 ಗಂಟೆಗಳಲ್ಲಿ 57,722 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆಯ ಅನುಪಾತ  10 ಕ್ಕಿಂತ ಹೆಚ್ಚಿನ 19 ಸ್ಥಳೀಯ ಸಂಸ್ಥೆಗಳಲ್ಲಿ 21 ವಾರ್ಡ್ ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.

                     ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,67,693 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 1,63,323 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 4,370 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 256 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

                  ಪ್ರಸ್ತುತ 43,454 ಕೋವಿಡ್ ಪ್ರಕರಣಗಳಲ್ಲಿ, ಕೇವಲ 7.6 ಪ್ರತಿಶತದಷ್ಟು ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಲಲ್ಲಿದ್ದಾರೆ. 

             ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿದ  23 ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 138 ಸಾವುಗಳು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 41,600ಕ್ಕೆ ಏರಿಕೆಯಾಗಿದೆ.

                ಇಂದು ಸೋಂಕು ಪತ್ತೆಯಾದವರಲ್ಲಿ 26 ಮಂದಿ ಹೊರ ರಾಜ್ಯದವರು. 4163 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 226 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ಮೂವತ್ತೈದು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ. 

                  ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4606 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 692, ಕೊಲ್ಲಂ 469, ಪತ್ತನಂತಿಟ್ಟ 249, ಆಲಪ್ಪುಳ 137, ಕೊಟ್ಟಾಯಂ 351, ಇಡುಕ್ಕಿ 268, ಎರ್ನಾಕುಳಂ 702, ತ್ರಿಶೂರ್ 355, ಪಾಲಕ್ಕಾಡ್ 193, ಮಲಪ್ಪುರಂ 105, ಕೋಝಿಕ್ಕೋಡ್ 542, ವಯನಾಡ್ 185, ಕಣ್ಣೂರು 295, ಕಾಸರಗೋಡು 63 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 43,454 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 50,80,211 ಮಂದಿ ಕೋವಿಡ್‍ನಿಂದ ಮುಕ್ತರಾಗಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries