HEALTH TIPS

7 ವರ್ಷಗಳಲ್ಲಿ 38 ಸಾವಿರ ಕೋಟಿಯಷ್ಟು ರಕ್ಷಣಾ ಸಾಮಗ್ರಿ ರಫ್ತು: ರಕ್ಷಣಾ ಸಚಿವ

             ನವದೆಹಲಿಭಾರತವು ಏಳು ವರ್ಷಗಳಲ್ಲಿ  38 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡಿದ್ದು, ಶೀಘ್ರದಲ್ಲೇ ಒಟ್ಟಾರೆ ನಿವ್ವಳ ರಫ್ತುದಾರ ರಾಷ್ಟ್ರವಾಗುವ ಭರವಸೆ ಇದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದರು.

             ಶನಿವಾರ ಇಲ್ಲಿ ನಡೆದ ಸೊಸೈಟಿ ಆಫ್‌ ಇಂಡಿಯನ್‌ ಡಿಫೆನ್ಸ್‌ ಮ್ಯಾನುಫ್ಯಾಕ್ಚರ್ಸ್‌ನ (ಎಸ್‌ಐಡಿಎಂ) ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಸಮಾವೇಶದಲ್ಲಿ ಮಾತನಾಡಿದ ಅವರು, 'ನಾವು ಅಂದಾಜು 85 ಸಾವಿರ ಕೋಟಿಯಷ್ಟು ಹೂಡಿಕೆಯ ಏರೋಸ್ಪೇಸ್‌ ಮತ್ತು ರಕ್ಷಣಾ ಉದ್ಯಮ ಹೊಂದಿದ್ದೇವೆ. ಇದರಲ್ಲಿ ಖಾಸಗಿ ವಲಯದ ಕೊಡುಗೆ  18 ಸಾವಿರ ಕೋಟಿಗೂ ಹೆಚ್ಚಿದೆ' ಎಂದರು.

            ರಾಷ್ಟ್ರದ ಭದ್ರತೆ ಬಲಪಡಿಸಲು ನೆರವಾಗುವ ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಹೂಡಿಕೆ ಮಾಡುವಂತೆ ಸಚಿವರು ಎಂಎಸ್‌ಎಂಇ ಪ್ರತಿನಿಧಿಗಳಿಗೆ ತಿಳಿಸಿದರು.

               ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಸುಮಾರು 12,000 ಎಂಎಸ್‌ಎಂಇಗಳು ರಕ್ಷಣಾ ಉದ್ಯಮಕ್ಕೆ ಸೇರಿಕೊಂಡಿವೆ ಎಂದು ಅವರು ಮಾಹಿತಿ ನೀಡಿದರು.

                ಸರ್ಕಾರವು 2024-25ರ ವೇಳೆಗೆ  35,000 ಕೋಟಿ ರಫ್ತು ಗುರಿ ಸಾಧಿಸುವ ಯೋಜನೆ ಹೊಂದಿದೆ. ಪ್ರಸ್ತುತ, ಭಾರತವು ಸುಮಾರು 70 ದೇಶಗಳಿಗೆ ರಕ್ಷಣಾ ಸಾಧನಗಳನ್ನು ರಫ್ತು ಮಾಡುತ್ತಿದೆ. ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ 2020ರ ವರದಿಯ ಪ್ರಕಾರ, ಭಾರತವು ಅತಿ ಹೆಚ್ಚು ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುತ್ತಿರುವ ಅಗ್ರ 25 ದೇಶಗಳ ಪಟ್ಟಿಯಲ್ಲಿದೆ ಎಂದು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries