HEALTH TIPS

ರಾಜ್ಯದಲ್ಲಿ ಶೇ.70 ರಷ್ಟು ಸಂಪೂರ್ಣ ಲಸಿಕೆ ವಿತರಣೆ: ಸಚಿವೆ ವೀಣಾ ಜಾರ್ಜ್

                ತಿರುವನಂತಪುರ: ರಾಜ್ಯದಲ್ಲಿ ಒಟ್ಟು ಕೊರೊನಾ ಲಸಿಕೆ ಪ್ರಮಾಣ ಶೇ.70 ಮೀರಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಆರೋಗ್ಯ ಸಚಿವರು ನೀಡಿರುವ ಮಾಹಿತಿಯನ್ವಯ, ಅರ್ಹ ಜನಸಂಖ್ಯೆಯ ಶೇಕಡಾ 96.87 (2,58,72,847) ಜನರು ಮೊದಲ ಡೋಸ್ ಮತ್ತು 70.37 ಶೇಕಡಾ (1,87,96,209) ಎರಡನೇ ಡೋಸ್  ಲಸಿಕೆ ಹಾಕಿಸಿಕೊಂಡಿದ್ದಾರೆ.

                ಒಂದನೇ ಮತ್ತು ಎರಡನೇ ಡೋಸ್ ಸೇರಿದಂತೆ ಒಟ್ಟು 4,46,69,056 ಡೋಸ್ ಲಸಿಕೆ ನೀಡಲಾಗಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು. ರಾಷ್ಟ್ರಮಟ್ಟದಲ್ಲಿ, ಮೊದಲ ಡೋಸ್ 86.52 ಶೇಕಡ ಮತ್ತು ಎರಡನೇ ಡೋಸ್ 53.84 ಶೇಕಡ ಆಗಿದೆ.

               ವಿದೇಶಗಳಲ್ಲಿ ಓಮಿಕ್ರಾನ್ ವರದಿಗಳ ಹಿನ್ನೆಲೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಭಾಗವಾಗಿ ರಾಜ್ಯದಲ್ಲಿ ವಿಶೇಷ ಕೊರೋನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಸ್ಥಳೀಯಾಡಳಿತ ಪ್ರತಿನಿಧಿಗಳ ಸಹಯೋಗದಲ್ಲಿ ಎರಡನೇ ಡೋಸ್ ಲಸಿಕೆಯನ್ನು ಪೂರ್ಣಗೊಳಿಸಲು ಉಳಿದವರನ್ನು ಗುರುತಿಸಿ ಲಸಿಕೆ ಹಾಕುವುದು ಗುರಿಯಾಗಿದೆ. ವಿಶೇಷ ಲಸಿಕೆ ಅಭಿಯಾನದ ಭಾಗವಾಗಿ ದೈನಂದಿನ ವ್ಯಾಕ್ಸಿನೇಷನ್ ಕೂಡ ಹೆಚ್ಚಾಗಿದೆ ಎಂದು ವೀಣಾ ಜಾರ್ಜ್ ಹೇಳಿದರು.

           ಕೊರೋನಾ ಇರುವವರು 3 ತಿಂಗಳ ನಂತರ ಮಾತ್ರ ಲಸಿಕೆ ಹಾಸಿಸಬೇಕು. ಲಸಿಕೆಯ ಎರಡನೇ ಡೋಸ್ ತೆಗೆದುಕೊಳ್ಳುವವರು ವಿಳಂಬ ಮಾಡಬಾರದು. ಎರಡನೇ ಡೋಸ್ ನ್ನು ಕೋವ್ಯಾಕ್ಸಿನ್ ಲಸಿಕೆ ಹಾಕಿದ 84 ದಿನಗಳ ನಂತರ ಮತ್ತು ಕೋವಿಶೀಲ್ಡ್ ನೀಡಿದ 28 ದಿನಗಳ ನಂತರ ತಕ್ಷಣವೇ ತೆಗೆದುಕೊಳ್ಳಬೇಕು. ಇನ್ನೂ ಲಸಿಕೆ ಹಾಕಿಸಿಕೊಳ್ಳದಿರುವವರು ಕೂಡಲೇ ಲಸಿಕೆ ಹಾಕಿಸಿಕೊಳ್ಳುವಂತೆ ಸಚಿವರು ಮನವಿ ಮಾಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries