HEALTH TIPS

ಪ್ರತಿನಿತ್ಯ ಬಿಸಿನೀರಿಗೆ ಕರಿಮೆಣಸು ಸೇರಿಸಿ ಕುಡಿದರೆ, ಆರೋಗ್ಯದಲ್ಲಿ ಬದಲಾವಣೆ ಖಂಡಿತ!

        ನಮ್ಮ ಅನಾರೋಗ್ಯ ಜೀವನಶೈಲಿಯಿಂದಾಗಿ, ರೋಗಗಳು ನಮ್ಮನ್ನು ಬಿಡುಬಿಡದಂತೆ ಕಾಡುತ್ತಿರುತ್ತವೆ. ಆದ್ದರಿಂದ ಉತ್ತಮ ರೋಗನಿರೋಧಕ ಶಕ್ತಿ ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ.

          ನಾವು ದಿನನಿತ್ಯ ಬಳಸುವ ಮಸಾಲೆ ಪದಾರ್ಥಗಳಲ್ಲಿ ಕಾಳುಮೆಣಸು/ಕರಿಮೆಣಸು ಕೂಡ ಒಂದು. ಇದು ನಾಲಗೆಗೆ ಖಾರವಾಗಿದ್ದರೂ, ದೇಹಕ್ಕೆ ತಂಪನ್ನು ಮಾಡುವ ಗುಣವನ್ನು ಹೊಂದಿದೆ. ಈ ಕರಿಮೆಣಸಿನ ಪ್ರಯೋಜನಗಳನ್ನು ಮತ್ತಷ್ಟು ಹೆಚ್ಚಿಸಲು ಬಿಸಿನೀರಿನ ಜೊತೆಗೆ ಸೇವಿಸಬೇಕು. ಇದರಿಂದ ಆರೋಗ್ಯಕ್ಕೆ ಎಂತಹ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ನೋಡೋಣ.


                   ಬಿಸಿನೀರಿಗೆ ಕಾಳುಮೆಣಸು ಬೆರೆಸಿ, ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ:

       ನಿರ್ಜಲೀಕರಣವನ್ನು ತಡೆಯುವುದು: ನೀವು ಪ್ರತಿದಿನ ಬಿಸಿನೀರಿನ ಜೊತೆಗೆ ಕರಿಮೆಣಸನ್ನು ಬೆರೆಸಿ ಸೇವಿಸುವುದರಿಂದ, ನಿರ್ಜಲೀಕರಣವನ್ನು ತಡೆಯಲು ನಿಮಗೆ ಸಹಾಯ ಮಾಡುತ್ತದೆ. ಮತ್ತೊಂದೆಡೆ, ಇದು ಚರ್ಮಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಇದು ಚರ್ಮದ ಕೋಶಗಳನ್ನು ಪೋಷಿಸುವುದಲ್ಲದೇ, ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ. ಜೊತೆಗೆ ಇಡೀ ದಿನ ನಿಮ್ಮನ್ನು ಶಕ್ತಿಯುತವಾಗಿರಿಸಲು ಸಹಾಯ ಮಾಡುವುದರಿಂದ ಪ್ರತಿದಿನ ಕರಿಮೆಣಸಿನ ನೀರನ್ನು ಸೇವಿಸಬೇಕು.
            ಮಲಬದ್ಧತೆಯ ಸಮಸ್ಯೆ ದೂರವಿಡುವುದು: ನಿಮ್ಮ ಹೊಟ್ಟೆಯ ಸಮಸ್ಯೆಗಳನ್ನು ದೂರವಿಡಲು ಕಾಳುಮೆಣಸಿನ ಜೊತೆಗೆ ಸಾಕಷ್ಟು ನೀರು ಸಹಾಯ ಮಾಡುತ್ತದೆ. ದೀರ್ಘಕಾಲದಿಂದ ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಪ್ರತಿದಿನ ಕುಡಿಯಬೇಕು. ಇದು ನಿಮಗೆ ಮಲವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಅವುಗಳನ್ನು ಪ್ರತಿದಿನ ಸೇವಿಸುವುದರಿಂದ, ತುಂಬಾ ಹಗುರವಾಗಿರುತ್ತೀರಿ. ಜೊತೆಗೆ ಕರಿಮೆಣಸಿನಿಂದ ತಯಾರಿಸಿದ ಆಹಾರವು, ನಮ್ಮ ದೇಹದಲ್ಲಿನ ಹೆಪ್ಪುಗಟ್ಟಿದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ ನಮ್ಮ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
           ರೋಗನಿರೋಧಕ ಶಕ್ತಿ ವೃದ್ಧಿ: ನೀವು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಬಯಸಿದರೆ, ಕರಿಮೆಣಸಿನ ನೀರನ್ನು ಸೇವಿಸುವುದು ತುಂಬಾ ಸಹಕಾರಿ. ಕರಿಮೆಣಸಿನ ಬಗ್ಗೆ ಹೇಳುವುದಾದರೆ, ಇದರಲ್ಲಿ ಹಲವಾರು ಅಂಶಗಳಿದ್ದು,ಇದರ ಸೇವನೆಯು ಶೀತ ಮತ್ತು ನೆಗಡಿಯಂತಹ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತದೆ. ಪ್ರತಿದಿನ ಅವುಗಳನ್ನು ಸೇವಿಸುವುದರಿಂದ, ಜೀವಕೋಶಗಳಿಗೆ ಹೇರಳವಾದ ಪೋಷಕಾಂಶಗಳು ಸಿಗುತ್ತವೆ. ಇದು ಋತುಮಾನದಲ್ಲಿ ಬರುವ ರೋಗಗಳಿಂದಲೂ ನಿಮಗೆ ರಕ್ಷಣೆ ನೀಡುತ್ತದೆ.
        ದೇಹವನ್ನು ನೈಸರ್ಗಿಕವಾಗಿ ನಿರ್ವಿಷಗೊಳಿಸುವುದು: ಈ ಪಾನೀಯ ಉತ್ತಮ ಡಿಟಾಕ್ಸ್‌ ಅಗಿ ಕಾರ್ಯನಿರ್ವಹಿಸುತ್ತದೆ. ಪ್ರತಿದಿನ ಕರಿಮೆಣಸಿನ ಜೊತೆಗೆ ಬಿಸಿನೀರನ್ನು ಸೇವಿಸಿದರೆ, ಅದು ದೇಹಕ್ಕೆ ತುಂಬಾ ಸಹಾಯ ಮಾಡುತ್ತದೆ. ದೇಹದಲ್ಲಿರುವ ಕಲ್ಮಷಗಳನ್ನು ಹೊರಹಾಕುವ ಮೂಲಕ, ನಿಮ್ಮನ್ನು ಡಿಟಾಕ್ಸ್‌ ಮಾಡುವುದು.
          ತೂಕವನ್ನು ನಿಯಂತ್ರಿಸುವುದು: ನಿಮ್ಮ ತೂಕವನ್ನು ನಿಯಂತ್ರಿಸಲು ಬಯಸಿದರೆ ಇದು ನಿಮಗೆ ಸಹಾಯ ಮಾಡುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ, ನಿಮ್ಮ ಚಯಾಪಚಯವು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಅಲ್ಪಾವಧಿಯಲ್ಲಿಯೇ ಸಾಕಷ್ಟು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ಇದರಿಂದಾಗಿ ದೇಹದ ತೂಕವು ನಿಯಂತ್ರಣದಲ್ಲಿರುತ್ತದೆ. ಮತ್ತೊಂದೆಡೆ, ನಿಮ್ಮ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಲು ಸಹ ಇದನ್ನು ಕುಡಿಯಬಹುದು.
       ಕರಿಮೆಣಸಿನ ಇತರ ಪ್ರಯೋಜನಗಳು: ಅಧ್ಯಯನದ ಪ್ರಕಾರ, ಕರಿಮೆಣಸು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಪೈಪರೀನ್ ಎಂಬ ರಾಸಾಯನಿಕವಿದೆ. ಅರಿಶಿನದೊಂದಿಗೆ ನಿಯಮಿತ ಸೇವನೆ ಮಾಡಿದರೆ ಕ್ಯಾನ್ಸರ್ ಅನ್ನು ತಡೆಯುತ್ತದೆ. ಕರಿಮೆಣಸು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ರೋಗವನ್ನು ಸಹ ತಡೆಯುತ್ತದೆ. ಜೊತೆಗೆ ಆಹಾರದಲ್ಲಿ ಕರಿಮೆಣಸನ್ನು ನಿಯಮಿತವಾಗಿ ಸೇವಿಸಿದರೆ, ಅದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದಾಗಿ ಮಧುಮೇಹದ ಅಪಾಯವೂ ಕಡಿಮೆಯಾಗುತ್ತದೆ. ಇನ್ನೇಕೆ ತಡ, ಇನ್ನುಮುಂದಾದರೂ, ನಿಮ್ಮ ಆಹಾರದಲ್ಲಿ ಕರಿಮೆಣಸನ್ನು ಸೇರಿಸುವುದನ್ನು ಮರೆಯಬೇಡಿ.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries