HEALTH TIPS

ಗಂಡ-ಹೆಂಡತಿ ಕಲಹದಲ್ಲಿ ಕೂಸು ಬಡವಾಗಬಾರದು: ಸುಪ್ರೀಂಕೋರ್ಟ್‌

          ನವದೆಹಲಿ: ಗಂಡ ಮತ್ತು ಹೆಂಡತಿ ನಡುವಿನ ಕಲಹದಿಂದ ಮಗುವಿಗೆ ತೊಂದರೆ ಉಂಟಾಗಬಾರದು ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

           ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಮತ್ತು ಎ.ಎಸ್‌.ಬೋಪಣ್ಣ ಅವರನ್ನೊಳಗೊಂಡ ಪೀಠವೊಂದು ಸೇನಾಧಿಕಾರಿಯೊಬ್ಬರ ವಿವಾಹ ವಿಚ್ಛೇದನ ಕುರಿತ ಅರ್ಜಿ ಕುರಿತಂತೆ ಈ ಹೇಳಿಕೆ ನೀಡಿದೆ.

             13 ವರ್ಷದ ಮಗನು ವಯಸ್ಕ ಹಂತಕ್ಕೆ ಬರುವವರೆಗೆ ಆತನ ಯೋಗಕ್ಷೇಮವನ್ನು ನೋಡಿಕೊಳ್ಳಬೇಕು.

           ಪತ್ನಿಗೆ ಜೀವನ ನಿರ್ವಹಣೆಗೆ ₹50 ಸಾವಿರ ಸಂದಾಯ ಮಾಡಬೇಕು ಎಂದು ಪೀಠವು ಸೇನಾಧಿಕಾರಿಗೆ ನಿರ್ದೇಶನ ನೀಡಿದೆ.

            'ಅರ್ಜಿದಾರರಾದ ಪತ್ನಿ ಮತ್ತು ಪ್ರತಿವಾದಿ ಪತಿಯ ಹೇಳಿಕೆಗಳಲ್ಲಿ ವಾಸ್ತವಾಂಶಗಳನ್ನು ಪರಿಗಣಿಸಿದಾಗ ಇಬ್ಬರೂ 2011ರ ಮೇ ನಿಂದ ಒಟ್ಟಿಗೆ ವಾಸವಾಗಿಲ್ಲ. ಆದ್ದರಿಂದ ಇಬ್ಬರ ನಡುವಿನ ಮದುವೆಯ ಬಂಧ ಕಡಿತಗೊಂಡಿದೆ ಎಂದು ಹೇಳಬಹುದು. ಇನ್ನೊಂದೆಡೆ ಗಂಡ ಪುನರ್ವಿವಾಹವಾಗಿದ್ದಾರೆ. ಸಂವಿಧಾನದ 142ನೇ ವಿಧಿಯ ಪ್ರಕಾರ ಪ್ರಕರಣದ ಸತ್ಯಾಂಶಗಳನ್ನು ಗಮನದಲ್ಲಿಟ್ಟುಕೊಂಡು ಕೌಟುಂಬಿಕ ನ್ಯಾಯಾಲಯವು ನೀಡಿರುವ ವಿಚ್ಛೇದನದ ತೀರ್ಪಿನಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ' ಎಂದು ಹೇಳಿದೆ.

             ಪತಿಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಅವರು ತಮ್ಮ ಮಗ ವಯಸ್ಕನಾಗುವವರೆಗೆ ಆತನ ಪೋಷಣೆ ಮಾಡಬೇಕು. ಪತಿ ಮತ್ತು ಪತ್ನಿಯರ ನಡುವಿನ ಕಲಹ ಏನೇ ಇರಬಹುದು. ಆದರೆ ಮಗು ಇದರಿಂದ ಯಾವುದೇ ತೊಂದರೆ ಪಡುವಂತಾಗಬಾರದು' ಎಂದು ಪೀಠ ತಿಳಿಸಿದೆ.

          'ತಾಯಿಗೆ ಯಾವುದೇ ಆದಾಯ ಮೂಲವಿಲ್ಲ. ಆದ್ದರಿಂದ ಮಗುವಿನ ಪಾಲನೆ, ಪೋಷಣೆ ಮತ್ತು ಜೀವನ ನಿರ್ವಹಣೆಗೆ ಅಗತ್ಯ ಪ್ರಮಾಣದ ಹಣದ ಅವಶ್ಯವಿದೆ. ಇದು ಪೂರ್ಣವಾಗಿ ಪತಿಯಿಂದಲೇ ಸಂದಾಯವಾಗಬೇಕು. 2019ರ ಡಿಸೆಂಬರ್‌ನಿಂದ ಅನ್ವಯವಾಗುವಂತೆ ಪತಿಯು ತನ್ನ ಪತ್ನಿಗೆ ಪ್ರತಿ ತಿಂಗಳು ₹ 50 ಸಾವಿರ ನೀಡಬೇಕು' ಎಂದೂ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

             2005ರ ನವೆಂಬರ್‌ 16 ರಂದು ಸೇನಾಧಿಕಾರಿಯ ವಿವಾಹ ನೆರವೇರಿತ್ತು. ಪತ್ನಿಯು ತನ್ನ ಪತಿಗೆ ವಿವಾಹೇತರ ಸಂಬಂಧಗಳು ಇರುವುದಾಗಿ ಸೇನಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಬಗ್ಗೆ ಸೇನೆಯು ಅಧಿಕಾರಿಯ ವಿರುದ್ಧ ವಿಚಾರಣೆಯೊಂದನ್ನು ನಡೆಸಿತ್ತು.

            2014ರಲ್ಲಿ ಸೇನಾಧಿಕಾರಿಯು ಜೈಪುರ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿ ವಿಚ್ಛೇದನ ಪಡೆದುಕೊಂಡಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries