ಬದಿಯಡ್ಕ: ನೀರ್ಚಾಲು ಸಮೀಪದ ಕಿಳಿಂಗಾರು ನಿಡುಗಳ ಶ್ರೀ ಅಯ್ಯಪ್ಪ ಭಜನಾ ಮಠದಲ್ಲಿ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ಛಾಯಾಬಿಂಬದ ಪ್ರತಿಷ್ಠಾ ಮಹೋತ್ಸವವು ಕುಂಭಲಗ್ನ ಶುಭಮುಹೂರ್ತದಲ್ಲಿ ಗುರುಸ್ವಾಮಿ ಸಂಜೀವ ರೈ ನಿಡುಗಳ ಇವರ ದಿವ್ಯ ಹಸ್ತದಿಂದ ಬುಧವಾರ ನೆರವೇರಿತು. ಅಯ್ಯಪ್ಪ ನಾಮಸ್ಮರಣೆಯೊಂದಿಗೆ ಅಯ್ಯಪ್ಪ ವ್ರತಧಾರಿಗಳು ಸಹಕರಿಸಿದರು. ನಂತರ ಶರಣಂ ವಿಳಿ, ವಿವಿಧ ಭಜನಾ ಸಂಘಗಳಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನದಾನ ನೆರವೇರಿತು. ಊರಪರವೂರ ನೂರಾರು ಅಯ್ಯಪ್ಪ ವ್ರತಧಾರಿಗಳು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.

