ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಕಾರ್ಮಿಕ ಸಂಘಟನೆ ಸಿಐಟಿಯು ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು. ನಿರ್ಮಾಣವಲಯದಲ್ಲಿನ ಬಿಕ್ಕಟ್ಟು ಪರಿಹರಿಸಬೇಕು, ಪೊಲೀಸ್, ಕಂದಾಯ, ಜಿಯಾಲಜಿ ಇಲಾಖೆ ಅಧಿಕಾರಿಗಳು ನೀಡುವ ಕಿರುಕುಳ ಕೊನೆಗಾಣಿಸಬೇಕು, ಅರ್ಹರಿಗೆ ಗಣಿಗಾರಿಕೆಗೆ ಅನುಮತಿ ನೀಡಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ನಡೆಸಲಾಯಿತು.
ಸಿಐಟಿಯು ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಕೆ ರಾಜನ್ ಧರಣಿ ಉದ್ಘಾಟಿಸಿದರು. ಬಾಬು ಎಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ಕೆ. ಭಾಸ್ಕರನ್, ಕಾಟ್ಟಡಿ ಕುಮಾರನ್, ಎಂ.ವಿ ಚಂದ್ರನ್, ಟಿ.ನಾರಾಯಣನ್, ಎಂ.ರಾಮನ್, ಶಶಿ ಉಪಸ್ಥಿತರಿದ್ದರು.




