ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ವಾಣಿಜ್ಯ ಶ್ರಮಿಕ್ ಸಂಘ್(ಬಿಎಂಎಸ್)ವತಿಯಿಂದ ಗುರುವಾರ ಜಿಲ್ಲಾ ಕ್ಷೇಮನಿಧಿ ಕಚೇರಿ ಎದುರು ಧರಣಿ ನಡೆಸಲಾಯಿತು. ಎಲ್ಲಾ ವಾಣಿಜ್ಯ ಸಂಘಗಳನ್ನು ಕ್ಷೇಮನಿಧಿಯಲ್ಲಿ ನೋಂದಾಯಿಸಬೇಕು, ಎಲ್ಲ ಕಾರ್ಮಿಕರನ್ನೂ ಕ್ಷೇಮನಿಧಿಗೆ ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ಕ್ಷೇಮನಿಧಿ ಬೋರ್ಡ್‍ನಲ್ಲಿ ಬಿಎಂಎಸ್ ಪ್ರತಿನಿಧಿಯನ್ನು ಸೇರ್ಪಡೆಗೊಳಿಸಬೇಕು, ಜಿಲ್ಲೆಯ ಇಎಸ್‍ಐ ವ್ಯಾಪ್ತಿಗೊಳಪಟ್ಟವರಿಗೆ ಕರ್ನಾಟಕದಲ್ಲೂ ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು.
ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಕೆ.ಎ ಶ್ರೀನಿವಾಸನ್ ಉದ್ಘಾಟಿಸಿದರು. ವಾನಿಜ್ಯ ಶ್ರಮಿಕ ಸಂಘ್ ಜಿಲ್ಲಾಧ್ಯಕ್ಷ ಎ.ಬಾಬು ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಅನಿಲ್ ಬಿ.ನಾಯರ್, ಹರೀಶ್ ಕುದ್ರೆಪ್ಪಾಡಿ, ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು. ಪುಷ್ಪರಾಜ್ ಕೊರಕ್ಕೋಡ್, ಸಚಿನ್ ಜೆ.ಪಿ ನಗರ, ಬಾಲಕೃಷ್ಣನ್ ಕಲ್ಯಾಣ್, ಬಾಲದಾಸ್ ತಟ್ಟುಮ್ಮಲ್, ರಮೇಶ್ ಬದಿಯಡ್ಕ, ಸುಬ್ಬ ಬಾಯಾರ್, ಶೈಲಜಾ ನೀರ್ಚಾಲ್, ರೋಹಿತಾಕ್ಷನ್ ನೇತೃತ್ವ ನೀಡಿದರು. ಜಿಲ್ಲಾ ಕಾರ್ಯದರ್ಶಿ ಪಿ.ದಿನೇಶ್ ಸ್ವಾಗತಿಸಿದರು.ಶ್ರೀಧರ ಚೇನಕ್ಕೋಡ್ ವಂದಿಸಿದರು.




