ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದಲ್ಲಿ ಹಿಂದೂ ಮತ್ತು ಜೈನರ ಆರಾಧನಾ ಮೂರ್ತಿಗಳನ್ನು ಪುನರ್ ಪ್ರತಿಷ್ಠಾಪಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.
0
samarasasudhi
ಡಿಸೆಂಬರ್ 09, 2021
ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದಲ್ಲಿ ಹಿಂದೂ ಮತ್ತು ಜೈನರ ಆರಾಧನಾ ಮೂರ್ತಿಗಳನ್ನು ಪುನರ್ ಪ್ರತಿಷ್ಠಾಪಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.
ಮಹಮ್ಮದ್ ಘೋರಿ ಆಡಳಿತದಲ್ಲಿ ಸೇನಾ ನಾಯಕನಾಗಿದ್ದ ಕುತುಬುದ್ದೀನ್ ಐಬಕ್ 27 ದೇವಾಲಯಗಳನ್ನು ಭಾಗಶಃ ಧ್ವಂಸ ಮಾಡಿದ್ದು, ಇವುಗಳ ಸಾಮಗ್ರಿಗಳನ್ನು ಬಳಸಿ ಕುತುಬ್ ಮಿನಾರ್ ಸಂಕೀರ್ಣದೊಳಗೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಧೀಶೆ ನೇಹಾ ಶರ್ಮಾ 'ಭಾರತವು ಸಂಪನ್ನ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದೆ. ಇಲ್ಲಿ ಅಸಂಖ್ಯಾತ ರಾಜವಂಶಸ್ಥರು ಆಳ್ವಿಕೆ ನಡೆಸಿದ್ದಾರೆ. ಹಿಂದೆ ತಪ್ಪುಗಳಾಗಿವೆ ಎಂಬುದನ್ನು ಯಾರೂ ನಿರಾಕರಿಸುತ್ತಿಲ್ಲ. ಆದರೆ ಆ ತಪ್ಪುಗಳು ಪ್ರಸ್ತುತ ಸಮಾಜದ ಶಾಂತಿ ಕದಡಲು ಕಾರಣವಾಗಬಾರದು' ಎಂದಿದ್ದಾರೆ.