ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ಎ ಎಲ್ ಪಿ ಶಾಲೆಯಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಸೈನಿಕರ ದುರ್ಮರಣದ ಸಂತಾಪ ಸೂಚಕ ಸಭೆ ಗುರುವಾರ ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್ |ಈ ಸಂದರ್ಭ ಅಧ್ಯಕ್ಷತೆ ವಹಿಸಿ ಮಾತನಾಡಿ, 'ಬಿಪಿನ್ ರಾವತ್ ಈ ದೇಶ ಕಂಡ ಶ್ರೇಷ್ಠ ಸೈನ್ಯಾಧಿಕಾರಿ. ಅವರ ಅಗಲುವಿಕೆ ನಮಗೆಲ್ಲರಿಗೂ ತುಂಬಲಾರದ ನಷ್ಟ. ನಮ್ಮ ಸುಸ್ಧಿರ ಬದುಕಿಗೆ ಸೈನ್ಯ ಮತ್ತು ಕೃಷಿಕರ ಕೊಡುಗೆ ಅಪಾರವಾಗಿದೆ. ಇವರನ್ನು ಪ್ರತಿಯೊಬ್ಬ ಪೌರರು ಗೌರವಿಸಬೇಕು. ಭಾವೀ ಭಾರತದ ಶಿಲ್ಪಿಗಳಾಗುವ ಮಕ್ಕಳು ಈ ಶ್ರೇಷ್ಠ ವ್ಯಕ್ತಿಯನ್ನು ಆದರ್ಶವಾಗಿಟ್ಟು ನಾವೆಲ್ಲರೂ ಭಾರತೀಯರು ಎಂಬ ಭಾವದೊಂದಿಗೆ ಮುಂದೆ ಸಾಗಬೇಕು' ಎಂದು ಸೈನಿಕರಿಗೆ ನುಡಿನಮನ ಸಲ್ಲಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಅಮೀಗೊ, ಸದಸ್ಯ ರಾಧಾಕೃಷ್ಣ ಪಳ್ಳಕಾನ, ಶಿಕ್ಷಕರಾದ ಕೋಟೆ ಗೋಪಾಲಕೃಷ್ಣ ಭಟ್, ಉದಯ ಸಾರಂಗ, ಶ್ಯಾಮ್ ರಂಜಿತ್, ಸುಶೀಲಾ, ಸಂಧ್ಯಾ ಉಮಾಶಂಕರಿ, ಸುರಕ್ಷಾ ಸೌಮ್ಯ ಮುಂತಾದವರು ಉಪಸ್ಥಿತರಿದ್ದರು.




