ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2022 ಮಾರ್ಚ್ ತಿಂಗಳ 2 ರಿಂದ 4 ರ ವರೆಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಶ್ರೀ ಕ್ಷೇತ್ರದ ಪಾತ್ರಿಗಳಾದ ಶ್ರೀ ಪ್ರವೀಣ್ ನಾಯಕ್ ಅವರು ಕ್ಷೇತ್ರದ ಅರ್ಚಕರಾದ ಕಿರಣ್ ಭಟ್ ಅವರಿಗೆ ನೀಡಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಂದಭರ್Àದಲ್ಲಿ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಕೆ. ಭಾಸ್ಕರ ರಾವ್, ಅಧ್ಯಕ್ಷರಾದ ರಮೇಶ್ ಕುದ್ರೆಕ್ಕೋಡು, ನಾಗೇಶ್ ನಾಯಕ್, ನವೀನ್ ನಾಯಕ್, ಪ್ರದೀಪ್ ನಾಯಕ್, ಹರೀಶ್ ಕೂಡ್ಲು, ವಾಮನ್ ರಾವ್ ಬೇಕಲ್, ಜಗದೀಶ್ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು.




