ಕಾಸರಗೋಡು: ಕೃಷಿಯನ್ನು ಜನಪರ ಉತ್ಸವವನ್ನಾಗಿ ಮಾಡುವುದು ಜತೆಗೆ, ಸುರಕ್ಷಿತ ಹಾಗೂ ಆರೋಗ್ಯಕರ ತರಕಾರಿ ಕೃಷಿಯಲ್ಲಿ ಸ್ವಾವಲಂಬಿಗಳಾಗುವಂತೆ ನೋಡಿಕೊಳ್ಳುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ಕೇರಳ ರಾಜ್ಯ ಕೃಷಿ ಸಚಿವ ಪಿ.ಪ್ರಸಾದ್ ತಿಳಿಸಿದ್ದಾರೆ.
ಅವರು ನಗರದ ಜನರಲ್ ಆಸ್ಪತ್ರೆ ವಠಾರದಲ್ಲಿ ಜಾರಿಗೊಳ್ಳಲಿರುವ ತರಕಾರಿ ಕೃಷಿ ಅಭಿವೃದ್ಧಿ ಯೋಜನೆಯನ್ವಯ ತರಕಾರಿ ಬೀಜ ಬಿತ್ತುವ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದರು.
ನಾಲಿಗೆ ರುಚಿಗಾಗಿ ತಮ್ಮ ಆರೋಗ್ಯ ಹದಗೆಡುವ ರೀತಿಯ ತಿನಿಸುಗಳಿಂದ ದೂರವಿರೊಸಿವಿದರ ಜತೆಗೆ ಆರೋಗ್ಯಪೂರ್ಣ ತಲೆಮಾರಿಗಾಗಿ ಕೃಷಿಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕಾಗಿದೆ. ತರಕಾರಿ ಬೆಲೆಯೇರಿಕೆಯನ್ನು ಸರ್ಕಾರ ಯಶಸ್ವಿವಾಗಿ ನಿಭಾಯಿಸಿದ್ದು, ಇತರ ರಾಜ್ಯಗಳಿಂದ ಏಜೆಂಟರ ನೆರವಿಲ್ಲದೆ, ತರಕಾರಿ ರಾಜ್ಯಕ್ಕೆ ಬಂದು ಸೇರುವಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಮಾದರಿ ಕೃಷಿಕ ನೆಲ್ಲಿಕುನ್ನು ನಿವಾಸಿ ಎಂ.ಬಿ ಪದ್ಮನಾಭ ಅವರನ್ನು ಸಚಿವರು ಸನ್ಮಾನಿಸಿದರು. ಕೃಷಿಯಲ್ಲಿ ಸಕ್ರಿಯರಾಗಿರುವ ಜನರಲ್ ಆಸ್ಪತ್ರೆ ಸಿಬ್ಬಂದಿ ಸೀತಮ್ಮ, ಪಿ.ಯು ಡೇವಿಸ್, ಮಿನಿಜೋಸ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾಸರಗೋಡು ನಗರಸಭಾ ಅಧ್ಯಕ್ಷ ವಿ.ಎಂ ಮುನೀರ್ ಅವರು ಜನರಲ್ ಆಸ್ಪತ್ರೆ ಮೇಲ್ವಿಚಾರಕ ಡಾ> ರಾಜಾರಾಂ ಅವರಿಗೆ ಕೃಷಿ ಸಲಕರಣೆ ಹಸ್ತಾಂತರಿಸುವ ಮೂಲಕ ಕೃಷಿಸಲಕರಣೆಗಳ ವಿತರಣಾ ಕಾರ್ಯ ಉದ್ಘಾಟಿಸಿದರು. ಕೃಷಿ ಇಲಾಖೆ ನಿರ್ದೇಶಕ ಸುಭಾಶ್ ವಿ.ಟಿ ಯೋಜನೆ ಬಗ್ಗೆ ಮಾಃಇತಿ ನೀಡಿದರು. ನಗರಸಭಾ ಸದಸ್ಯರಾದ ಅಬ್ಬಾಸ್ ಬೀಗಂ, ಖಾಲಿದ್ ಪಚ್ಚಕ್ಕಾಡ್, ಕೃಷಿ ಸಹಾಯಕ ನಿರ್ದೇಶಕರಾದ ಜಾರ್ಜ್ ಅಲೆಕ್ಸಾಂಡರ್, ಎಸ್. ಸುಕ್ಷ್ಮಾ ಕೃಷಿ ಇಲಾಖೆ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

