ಮಧೂರು: ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯಿಂದ ವಿದ್ವಾನ್ ಬ್ರಹ್ಮಶ್ರೀ ಡಾ.ಮಾಧವ ಉಪಾಧ್ಯಾಯ ಬಳ್ಳಪದವು ಅವರಿಗೆ ಅವರ ನುಳ್ಳಿಪ್ಪಾಡಿಯ ಸ್ವಗೃಹದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಉಪನ್ಯಾಸಕ ಪ್ರಮೋದ್, ಡಾ.ಮನೋಹರ್, ಅಧ್ಯಾಪಕಿ ಸರ್ವಮಂಗಳ ಪುಣಿಂಚಿತ್ತಾಯ, ಮುಳಿಯಾರು ಗ್ರಾಮ ಪಂಚಾಯತಿ ಸದಸ್ಯೆ ಅನೀಸಾ ಮನ್ಸೂರ್ ಮಲ್ಲ, ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಶುಭಹಾರೈಸಿದರು.
ಜಿಲ್ಲಾ ಕನ್ನಡ ಪತ್ರಕರ್ತ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಮುಂಬೈ ನಾವ ಶ್ರೀ ಮೂಕಾಂಬಿಕಾ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಸುರೇಶ್ ಕೋಟ್ಯಾನ್, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸ್ಥಾಪಕ ವಾಮನ್ ರಾವ್ ಬೇಕಲ್, ಪಂಚಾಯತಿ ಸದಸ್ಯ ಹರೀಶ್ ಗೋಸಾಡ, ಪೆÇ್ರ.ಎ.ಶ್ರೀನಾಥ್ ಕಾಸರಗೋಡು, ಜಗದೀಶ್ ಕೂಡ್ಲು, ನಟರಾಜ ಶರ್ಮ ಮೊದಲಾದವರು ಉಪಸ್ಥಿತರಿದ್ದರು.
ವಸಂತ ಬಾರಡ್ಕ ಪ್ರಾರ್ಥನೆ ಹಾಡಿದರು. ಅಕಾಡೆಮಿ ಜೊತೆ ಕಾರ್ಯದರ್ಶಿ ವಿದ್ಯಾಗಣೇಶ್ ಅಣಂಗೂರು ಸ್ವಾಗತಿಸಿ, ಅಖಿಲೇಶ್ ನಗುಮುಗಂ ವಂದಿಸಿದರು. ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.




