HEALTH TIPS

ನೃತ್ಯ ಸಂಯೋಜಕಿ ರಾಧಿಕಾ ಗಿನ್ನಿಸ್ ಬುಕ್ ಗೆ ಸೇರ್ಪಡೆ

          ಚೆನ್ನೈ: ಚಲನಚಿತ್ರ ನೃತ್ಯ ಸಂಯೋಜಕಿ ರಾಧಿಕಾ ಅವರು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ದಾಖಲೆಗೆ ಸೇರ್ಪಡೆಗೊಂಡಿದ್ದಾರೆ.

            ಚಲನಚಿತ್ರ ನೃತ್ಯ ಸಂಯೋಜಕಿ ರಾಧಿಕಾ ಅವರ ತಂಡ ಚೆನ್ನೈನ ವಿವಿಧ ಸ್ಥಳಗಳಲ್ಲಿ, ಅದೇ ರೀತಿ ಆನ್‌ ಲೈನ್‌ ನಲ್ಲಿ ನಿತ್ಯ ಒಂದು ಗಂಟೆ, 365 ದಿನಗಳು ನೃತ್ಯ ಪ್ರದರ್ಶನಗಳನ್ನು ನಡೆಸಿದ್ದರು.

           ಹಲವು ನೃತ್ಯಕಲಾವಿದರು ಭಾಗವಹಿಸಿದ್ದರು. ಕೊನೆಯ ದಿನ 600 ಕಲಾವಿದರೊಂದಿಗೆ ನಡೆಸಿದ ನೃತ್ಯ ಪ್ರದರ್ಶನ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ತೀರ್ಪುಗಾರರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವನ್ನು ಗಿನ್ನಿಸ್ ವಿಶ್ವ ದಾಖಲೆ ನಿರ್ವಾಹಕರು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.

              ರಾಧಿಕಾ ಅವರು ಎ ಎಂ ಎಸ್ ಲಲಿತಕಲಾ ಸಂಘಟಕ ಡಾ.ಆರ್.ಜೆ.ರಾಮನಾರಾಯಣನ್ ನೃತ್ಯ ಕಲೆಗಳನ್ನು ಉತ್ತೇಜಿಸಲು, ಅವುಗಳ ಬಗ್ಗೆ ಜಾಗೃತಿ ಮೂಡಿಸಲು ಚೆನ್ನೈನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

          ಪಾಂಡಿಚೇರಿ ಮುಖ್ಯಮಂತ್ರಿ ರಂಗಸ್ವಾಮಿ ಅವರು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು, ನೃತ್ಯಕಲಾವಿದರನ್ನು ಅಭಿನಂದಿಸಿ, ನೃತ್ಯ ನಿರ್ದೇಶಕಿ ರಾಧಿಕಾ ಅವರಿಗೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಪ್ರಮಾಣಪತ್ರ ಪ್ರದಾನ ಮಾಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries