HEALTH TIPS

ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಒಕ್ಕೂಟ ಚುನಾವಣೆ|: 100 ಕ್ಕೂ ಹೆಚ್ಚು ಮಂದಿಗಳಿಂದ ವಿಜಯೋತ್ಸವ ಸಂಭ್ರಮ: ವ್ಯಾಪಕ ಟೀಕೆ

                 ಕಣ್ಣೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನಕ್ಕೆ ಅರ್ಧ ಲಕ್ಷಕ್ಕೂ ಅಧಿಕವಾಗುತ್ತಿದ್ದು, ಕಣ್ಣೂರು ವಿಶ್ವವಿದ್ಯಾನಿಲಯ ಹೊತ್ತಿ ಉರಿಯುತ್ತಿದೆ. ಕೊರೋನಾ ಹರಡುವಿಕೆಯಿಂದಾಗಿ ಕಟ್ಟುನಿಟ್ಟಿನ ನಿರ್ಬಂಧಗಳಲ್ಲಿರುವ ಕಣ್ಣೂರಿನಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯನ್ನು ಧಿಕ್ಕರಿಸಿ ವಿಶ್ವವಿದ್ಯಾಲಯ-ಕಾಲೇಜು ಒಕ್ಕೂಟದ ಚುನಾವಣೆ ನಡೆಯಿತು.

                  100ಕ್ಕೂ ಹೆಚ್ಚು ಕ್ಯಾಂಪಸ್‍ಗಳಲ್ಲಿ ಚುನಾವಣೆ ನಡೆದಿದೆ. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಟ್ಟು ಸೇರದಂತೆ ಕಟ್ಟುನಿಟ್ಟಿನ ನಿಷೇಧವಿದ್ದರೂ ನಿಯಮಾವಳಿ ಗಾಳಿಗೆ ತೂರಿ ಕಾಲೇಜುಗಳಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಭ್ರಮಾಚರಣೆ ನಡೆಸಿದರು. ಕೋವಿಡ್ ಬಿ ಕೆಟಗರಿಯ ಕಣ್ಣೂರಿನಲ್ಲಿ ಚುನಾವಣೆ ನಡೆಸಬಾರದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದರೂ ವಿಶ್ವವಿದ್ಯಾಲಯ ಮತದಾನಕ್ಕೆ ಮುಂದಾಯಿತು.

                 ರೋಗಿಗಳ ಸಂಖ್ಯೆ ವಿಪರೀತವಾಗಿ ಹೆಚ್ಚಾದ ಕಾರಣ ಜಿಲ್ಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ರಾಜಕೀಯ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಆದೇಶವನ್ನೂ ಹೊರಡಿಸಿದ್ದರು.ಕಣ್ಣೂರು ವಿವಿ ಚುನಾವಣೆಯನ್ನು ಮುಂದೂಡುವಂತೆ ಜಿಲ್ಲಾಧಿಕಾರಿ ನೇರವಾಗಿ ಉಪಕುಲಪತಿಗಳಿಗೆ ಪತ್ರ ಬರೆದಿದ್ದರು. ಇದನ್ನು ಉಲ್ಲಂಘಿಸಿ ಚುನಾವಣೆ ನಡೆಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries