HEALTH TIPS

ಇಟಾಲಿಯಿಂದ ಅಮೃತಸರಕ್ಕೆ ಚಾರ್ಟರ್ ವಿಮಾನದಲ್ಲಿ ಬಂದಿದ್ದ 125 ಮಂದಿಗೆ ಕೋವಿಡ್-19 ಸೋಂಕು

            ನವದೆಹಲಿ: ಮಿಲಾನ್-ಅಮೃತಸರಕ್ಕೆ ಚಾರ್ಟರ್ ವಿಮಾನದಲ್ಲಿ ಆಗಮಿಸಿದ್ದ 125 ಪ್ರಯಾಣಿಕರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. 

           ಸರ್ಕಾರಿ ಅಧಿಕಾರಿಗಳು ಈ ಮಾಹಿತಿಯನ್ನು ಸ್ಪಷ್ಟಪಡಿಸಿದ್ದು, ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ಈ ಪ್ರಯಾಣಿಕರಲ್ಲಿ ಸೋಂಕು ದೃಢಪಟ್ಟಿದೆ ಎಂದು ಹೇಳಿದ್ದಾರೆ. ಬುಧವಾರ ಮಧ್ಯಾಹ್ನ 1:30 ಕ್ಕೆ ಅಮೃತಸರಕ್ಕೆ ಆಗಮಿಸಿದ ಚಾರ್ಟರ್ ವಿಮಾನ ವೈಯು 661 ನಲ್ಲಿ 179 ಪ್ರಯಾಣಿಕರು ಇದ್ದರು. 

          ಕೋವಿಡ್-19 ಗೆ ಸಂಬಂಧಿಸಿದಂತೆ ಇಟಾಲಿ ಅತಿ ಹೆಚ್ಚು ಅಪಾಯದ ಪಟ್ಟಿಯಲ್ಲಿರುವ ರಾಷ್ಟ್ರವಾಗಿರುವುದರಿಂದ ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಎಲ್ಲಾ 160 ಅರ್ಹ ಪ್ರಯಾಣಿಕರನ್ನೂ ಕೋವಿಡ್-19 ಸೋಂಕು ಪತ್ತೆ ತಪಾಸಣೆಗೆ ಕಳಿಸಲಾಯಿತು ಹಾಗೂ 125 ಮಂದಿ ಈ ಪೈಕಿ ಸೋಂಕು ಪೀಡಿತರಾಗಿದ್ದಾರೆ ಎಂದು ತಿಳಿದುಬಂದಿದೆ. 

            179 ಪ್ರಯಾಣಿಕರ ಪೈಕಿ 19 ಮಂದಿ ಮಕ್ಕಳು ಇದ್ದು, ಅವರನ್ನು ಆರ್ ಟಿಪಿಸಿಆರ್ ಟೆಸ್ಟಿಂಗ್ ಗೆ ಒಳಪಡಿಸಲಾಗಿದೆ. ಪೋರ್ಚುಗೀಸ್ ಸಂಸ್ಥೆ ಯುರಟ್ಲಾಂಟಿಕ್ ಏರ್ವೇಸ್ ಈ ಚಾರ್ಟರ್ ವಿಮಾನ ಸೇವೆಯನ್ನು ಒದಗಿಸಿತ್ತು ಎಂದು ಹೇಳಿದೆ.   


  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries