ತಿರುವನಂತಪುರ: ರಾಜ್ಯದಲ್ಲಿ ನಿನ್ನೆ 26,514 ಮಂದಿಗೆ ಕೋವಿಡ್ ದೃಢಪಡಿಸಲಾಗಿದೆ. ಎರ್ನಾಕುಳಂ 4443, ತಿರುವನಂತಪುರ 3256, ಕೋಝಿಕ್ಕೋಡ್ 2979, ತ್ರಿಶೂರ್ 2687, ಕೊಲ್ಲಂ 2421, ಕೊಟ್ಟಾಯಂ 1900, ಮಲಪ್ಪುರಂ 1710, ಪಾಲಕ್ಕಾಡ್ 1498, ಕಣ್ಣೂರು 1260, ಆಲಪ್ಪುಳ 1165, ಪತ್ತನಂತಿಟ್ಟ 1065, ಇಡುಕ್ಕಿ 1033, ಕಾಸರಗೋಡು 573 ಎಂಬಂತೆ ಕೋವಿಡ್ ದೃಢೀಕರಿಸಲಾಗಿದೆ.
ನಿನ್ನೆ ಸಂಜೆ ವರೆಗಿನ 24 ಗಂಟೆಗಳಲ್ಲಿ 55,557 ಮಾದರಿಗಳನ್ನು ಪರೀಕ್ಷಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,31,176 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಇವರಲ್ಲಿ 4,21,138 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 10,038 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 881 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಿನ್ನೆ ಸಂಜೆ ಕೊನೆಗೊಂಡ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 13 ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಪ್ರಕಾರ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 158 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 51,987ಕ್ಕೆ ಏರಿಕೆಯಾಗಿದೆ. ಪ್ರಸ್ತುತ 2,60,271 ಕೊರೋನಾ ಪ್ರಕರಣಗಳಲ್ಲಿ 3.8 ಪ್ರತಿಶತದಷ್ಟು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದವರಲ್ಲಿ 30,710 ಮಂದಿ ಚೇತರಿಸಿಕೊಂಡಿದ್ದಾರೆ. ತಿರುವನಂತಪುರ 12,131, ಕೊಲ್ಲಂ 1042, ಪತ್ತನಂತಿಟ್ಟ 1124, ಆಲಪ್ಪುಳ 753, ಕೊಟ್ಟಾಯಂ 1365, ಇಡುಕ್ಕಿ 594, ಎರ್ನಾಕುಳಂ 6050, ತ್ರಿಶೂರ್ 1802, ಪಾಲಕ್ಕಾಡ್ 869, ಮಲಪ್ಪುರಂ 972, ಕೋಝಿಕ್ಕೋಡ್ 2038, ವಯನಾಡ್ 317, ಕಣ್ಣೂರು 1100, ಕಾಸರಗೋಡು 553 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 2,60,271 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 53,56,642 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.

