HEALTH TIPS

35 ವರ್ಷಗಳಿಂದ ಶಬರಿಮಲೆ ದರ್ಶನ ಮಾಡುತ್ತಿರುವೆ: ಕೇರಳ ನೆಚ್ಚಿನ ರಾಜ್ಯ: ತೆಲಂಗಾಣದಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಅಯೋಧ್ಯಾ ರಾಮಿ ರೆಡ್ಡಿ

                                             

              ತೆಲಂಗಾಣ: ಹೈದರಾಬಾದ್ ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಸಿದ ಹೂಡಿಕೆದಾರರ ಸಮಾವೇಶದಲ್ಲಿ ಶಬರಿಮಲೆ ವಿಷಯದ ಬಗ್ಗೆಯೂ ಚರ್ಚೆ ನಡೆದಿದೆ. ಸಿಪಿಎಂ ಕೇಂದ್ರ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಹೈದರಾಬಾದ್ ಗೆ ತೆರಳಿದ್ದಾರೆ. ಈ ನಡುವೆ ಹೈದರಾಬಾದ್‍ನಲ್ಲಿ ಹೂಡಿಕೆ ಸಭೆ ನಡೆಸಲು ಸರ್ಕಾರ ಮುಂದಾಯಿತು.  ಹೈದರಾಬಾದ್‍ನ ಹೋಟೆಲ್ ಪಾರ್ಕ್ ಹಯಾತ್‍ನಲ್ಲಿ ಹೂಡಿಕೆ ಸಭೆ ನಡೆಯಿತು.

                ಕೈಗಾರಿಕಾ ಕ್ಷೇತ್ರದ ಬಿಕ್ಕಟ್ಟಿನಿಂದಾಗಿ ಕೇರಳ ತೊರೆಯಲು ಮುಂದಾಗಿದ್ದ ಕಿಟೆಕ್ಸ್ ನ್ನು ತೆಲಂಗಾಣ ಸರ್ಕಾರ ರಾಜ್ಯಕ್ಕೆ ಆಹ್ವಾನಿಸಿತ್ತು. ಇದು ದೊಡ್ಡ ಚರ್ಚೆಗೆ ಕಾರಣವಾಗಿದ್ದು, ತೆಲಂಗಾಣದಲ್ಲಿ ಹೂಡಿಕೆ ಸಮಾವೇಶ ಮಾಡಲು ಪಿಣರಾಯಿ ವಿಜಯನ್ ಅವರನ್ನು ಪ್ರೇರೇಪಿಸಿತು.

              ಕೇರಳದಲ್ಲಿ ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಯತ್ನ ರಾಜ್ಯ ಸರ್ಕಾರದ್ದಾಗಿತ್ತು.  ಮುಖ್ಯಮಂತ್ರಿಗಳನ್ನು ಒಳಗೊಂಡ ನಿಯೋಗವು ಜೈವಿಕ ತಂತ್ರಜ್ಞಾನ ಮತ್ತು ಮೂಲಸೌಕರ್ಯ ಕ್ಷೇತ್ರಗಳ ಸುಮಾರು 50 ಕಂಪನಿಗಳ ಕಾರ್ಯನಿರ್ವಾಹಕರನ್ನು ಭೇಟಿ ಮಾಡಿತು. ಆದರೆ ತೆಲಂಗಾಣದ ಉದ್ಯಮಿಗಳಿಗೆ ಕೇರಳದ ಪ್ರತಿನಿಧಿಗಳನ್ನು ಭೇಟಿಯಾಗುವಂತೆ ಪ್ರೇರೇಪಿಸಿದ್ದು ಶಬರಿಮಲೆ ಅಯ್ಯಪ್ಪನ ವಿಷಯ  ಎಂಬುದು ಸತ್ಯ.

                 ಹೂಡಿಕೆದಾರರ ಸಭೆಯ ಅಧ್ಯಕ್ಷತೆಯನ್ನು ವೈ.ಎಸ್.ಆರ್. ಕಾಂಗ್ರೆಸ್‍ನ ರಾಜ್ಯಸಭಾ ಸದಸ್ಯ ಅಯೋಧ್ಯಾ ರಾಮಿ ರೆಡ್ಡಿ ವಹಿಸಿದ್ದರು. ರಾಮರೆಡ್ಡಿ ಒಬ್ಬ ಪರಿಪೂರ್ಣ ಅಯ್ಯಪ್ಪ ಭಕ್ತ. ರಾಮಿ ರೆಡ್ಡಿ ಹಲವು ಬಾರಿ ಶಬರಿಮಲೆಗೆ ಭೇಟಿ ನೀಡಿದ್ದಾರೆ. ಕೇರಳ ನೆಚ್ಚಿನ ಸ್ಥಳವಾಗಿದೆ. ತನ್ನ ಅಚ್ಚುಮೆಚ್ಚಿನ ದೇವರು ಅಯ್ಯಪ್ಪನ ರಾಜ್ಯಕ್ಕಾಗಿ ಏನಾದರೂ ಮಹತ್ವದ ಕಾರ್ಯವನ್ನು ಮಾಡಬೇಕೆಂಬುದರ ಆಲೋಚನೆ ಅವರದು. ಹೂಡಿಕೆದಾರರ ಸಮಾವೇಶಕ್ಕೆ ಅಯ್ಯಪ್ಪ ಮತ್ತು ಕೇರಳದ ಮೇಲಿನ ಪ್ರೀತಿಯೇ ಪ್ರೇರಣೆ ಎಂದು ಅಯೋಧ್ಯಾ ರಾಮಿ ರೆಡ್ಡಿ ಮಾಧ್ಯಮಗಳಿಗೆ ಬಹಿರಂಗವಾಗಿ ಹೇಳಿದ್ದಾರೆ.

               ಕಳೆದ  ‘35 ವರ್ಷಗಳಿಂದ ಶಬರಿಮಲೆ ದರ್ಶನ ಮಾಡುತ್ತಿದ್ದಾರೆ. ಹಾಗಾಗಿಯೇ ಕೇರಳ ಇಷ್ಟವಾಯಿತು. ಕೇರಳದಲ್ಲಿ ಸಾಕಷ್ಟು ಸಂಪನ್ಮೂಲವಿದೆ.  ಇದರ ಸದುಪಯೋಗ ಪಡೆದುಕೊಳ್ಳಬೇಕು. ಅದಕ್ಕೆ ಅಯ್ಯಪ್ಪಸ್ವಾಮಿಯೇ ಸ್ಫೂರ್ತಿ ಎಂದು ಅಯೋಧ್ಯಾ ರಾಮಿ ರೆಡ್ಡಿ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries