ಕಾಸರಗೋಡು: ನಗರದ ಜನರಲ್ ಆಸ್ಪತ್ರೆ ವಠಾರದಲ್ಲಿನ ಹಳೇ ಕಟ್ಟಡಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಚಾಳನೆ ನೀಡಲಾಯಿತು. ಆಸ್ಪತ್ರೆ ವಠಾರದ ಸೆಕ್ಯೂರಿಟಿ ಗಾರ್ಡ್ ಕ್ಯಾಬಿನ್ ಸೇರಿದಂತೆ ಹಳೇ ಕಟ್ಟಡಗಳನ್ನು ಜೆಸಿಬಿ ಬಳಸಿ ಕೆಡವಿಹಾಕಲಾಗುತ್ತಿದೆ.
ಜನರಲ್ ಆಸ್ಪತ್ರೆಯಲ್ಲಿ ಎಂಡೋಸಲ್ಫಾನ್ ನಿಧಿ ಬಳಸಿ ನಿರ್ಮಿಸಲಾಗುತ್ತಿರುವ ಬಹು ಅಂತಸ್ತಿನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಜತೆಗೆ ಹಳೇ ಕಟ್ಟಡಗಳನ್ನು ತೆರವುಗೊಳಿಸಿ, ಹೊಸ ಕಟ್ಟಡಗಳ ನಿರ್ಮಾಣಗೊಳ್ಳಳಿದೆ. ಕಾಸರಗೋಡು ನಗರಸಭೆಯ ಮೇಲ್ನೋಟದಲ್ಲಿ ಕಾರ್ಯಾಚರಿಸುತ್ತಿರುವ ಜನರಲ್ ಆಸ್ಪತ್ರೆ ವಠಾರದಲ್ಲಿ ಸ್ಥಳಾವಕಾಶದ ಕೊರತೆ ನೀಗಿಸುವುದರ ಜತೆಗೆ ಕೆಲವೊಂದು ಹೊಸ ಕಟ್ಟಡಗಳನ್ನು ನಿರ್ಮಿಸಲು ಯೋಜನೆಯಿರಿಸಿಕೊಳ್ಳಲಾಗಿದೆ. ಇದರಲ್ಲಿ ಕೋವಿಡ್‍ಗೆ ಸಂಬಂಧಿಸಿದಂತೆ ಐಸೊಲೇಶನ್ ವಾರ್ಡುಗಳ ನಿರ್ಮಾಣವೂ ನಡೆಯಲಿರುವುದಾಗಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.




