ಬದಿಯಡ್ಕ: ಪ್ರತೀ ಮನೆಯ ಮಾತೆಯರು ತಮ್ಮ ಮಕ್ಕಳೊಂದಿಗೆ ಧಾರ್ಮಿಕ ಚಟುವಟಿಕೆಗಳಿಗೆ ಇಳಿದಾಗ ಮಕ್ಕಳಲ್ಲಿ ಭವಿಷ್ಯದ ಬಗ್ಗೆ ಚಿಂತನೆಯು ಮೂಡಿಬರಲು ಸಹಕಾರವಾಗುತ್ತದೆ. ತನ್ಮೂಲಕ ನಮ್ಮ ಸಂಸ್ಕಾರ, ಸಂಸ್ಕøತಿಯತ್ತ ಮಕ್ಕಳ ಚಿತ್ತ ಹರಿಯುತ್ತದೆ ಎಂದು ದಕ್ಷಿಣ ಗಾಣಗಾಪುರ ಒಡಿಯೂರು ಶ್ರೀಕ್ಷೇತ್ರದ ಸಾಧ್ವಿ ಶ್ರೀ ಮಾತಾನಂದಮಯಿ ತಿಳಿಸಿದರು.
ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರ ಪಾಂಚಜನ್ಯ ಸಭಾ ಭವನದ ಲೋಕಾರ್ಪಣಾ ಸಮಾರಂಭದಲ್ಲಿ ನಡೆದ ಮಾತೃಸಮಾವೇಶದಲ್ಲಿ ಅವರು ಆಶೀರ್ವಚನವನ್ನು ನೀಡಿ ಮಾತನಾಡಿದರು.
ಭವ್ಯ ಮಂದಿರದ ಮೂಲಕ ಕಲಾಮಾತೆಯ ಸೇವೆಯೂ ಮೂಡಿಬರಲಿ ಎಂದರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ವಸಂತಿ ಟೀಚರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಸರಗೋಡು ಮಹಿಳಾ ಸಂರಕ್ಷಣಾಕಾರಿ ಸುನಿತಾ ಎಂ.ವಿ, ಕಾಞಂಗಾಡು ಅಂಬಲತ್ತರ ಗ್ರಾಮಾಧಿಕಾರಿ ಸುಮಾರಾಜನ್, ಹೆಸರಾಂತ ಸಾಹಿತಿ ರಾಜಶ್ರೀ ಟಿ ರೈ ಪೆರ್ಲ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಹಿಳಾ ಸಮಿತಿ ಅಧ್ಯಕ್ಷೆ ಸರಸ್ವತಿ ಕೆ. ಸ್ವಾಗತಿಸಿ, ಮಹಿಳಾ ಸಮಿತಿಯ ಕಾರ್ಯದರ್ಶಿ ಶಾರದಾ ಕಲ್ಲಕಟ್ಟ ವಂದಿಸಿದರು. ಅನಿತಾ ಟೀಚರ್ ಬದಿಯಡ್ಕ ಕಾರ್ಯಕ್ರಮ ನಿರೂಪಿಸಿದರು.




