ಕುಂಬಳೆ: ಕಾಂಗ್ರೆಸ್‍ನ ಹಿರಿಯ ನಾಯಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ. ಕುಂಬಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಸಂಜೀವ ರೈ ಅವರನ್ನು ಆವರ್‍ಸೀಸ್ ಇಂಡಿಯನ್ ಕಲ್ಚರಲ್ ಕಾಂಗ್ರೆಸ್‍ನ ವತಿಯಿಂದ ಅವರ ನಿವಾಸಕ್ಕೆ ತೆರಳಿ ಗೌರವಿಸಲಾಯಿತು. ಆವರ್‍ಸೀಸ್ ಇಂಡಿಯನ್ ಕಲ್ಚರಲ್ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಎಂ. ಎಚ್. ಆರಿಸ್ ಶೇಣಿ, ಕಾಂಗ್ರೆಸ್ ಕಾರ್ಯಕರ್ತ ಅಬ್ದುಲ್ಲ ಕುರಡ್ಕ, ಯೂತ್ ಕಾಂಗ್ರೆಸ್ ಕಾರ್ಯಕರ್ತ ನೌಶಾದ್ ಶೇಣಿ, ಕಾಂಗ್ರೆಸ್ ಕಾರ್ಯಕರ್ತ ಶ್ರೀನಿವಾಸ ಶೆಣೈ, ಶೆರೀಫ್ ಪೆರ್ಲ ಉಪಸ್ಥಿತರಿದ್ದರು.




