ಕಾಸರಗೋಡು: ಸಿಪಿಎಂ ಕಾಸರಗೋಡು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಯಗಿ ಎಂ.ವಿ ಬಾಲಕೃಷ್ಣನ್ ಮಾಸ್ಟರ್ ಅವರನ್ನು ಪುನರಾಯ್ಕೆ ಮಾಡಲಾಗಿದೆ. ಶುಕ್ರವಾರ ಮಡಿಕೈಯಲ್ಲಿ ನಡೆದ ಜಿಲ್ಲಾ ಸಮ್ಮೇಳನದಲ್ಲಿ ಈ ಆಯ್ಕೆ ಮಾಡಲಾಗಿದೆ. ಪಕ್ಷದ ತಳಮಟ್ಟದಿಂದ ಹಲವು ಹುದ್ದೆಗಳನ್ನು ನಿರ್ವಹಿಸಿಕೊಮಡು ಬಂದಿರುವ ಇವರು, ಜಿಪಂ ಅಟಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 36ಮಂದಿ ಸದಸ್ಯರಿರುವ ಜಿಲ್ಲಾ ಸಮಿತಿಯಲ್ಲಿ ಈ ಬಾರಿ ಏಳು ಮಂದಿ ಹೊಸ ಮುಖಗಳಿಗೆ ಅವಕಾಶ ಕೊಡಲಾಗಿದೆ.ಜಿಲ್ಲಾ ಸಮಿತಿಯ 19ಮಂದಿಯನ್ನು ರಾಜ್ಯ ಸಮ್ಮೇಳನ ಪ್ರತಿನಿಧಿಗಳಾಗಿ ಆಯ್ಕೆ ಮಾಡಲಾಗಿದೆ.




