ಕಾಸರಗೋಡು: ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಅಂತಿಮ ವರ್ಷದ ಬಿಎಎಂಎಸ್ ಪದವಿ ಪರೀಕ್ಷೆಯಲ್ಲಿ ಎಡನೀರಿನ ಶುಭಾ ಎಸ್. ಭಟ್ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ. ಇವರು ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆ ಹಳೇ ವಿದ್ಯಾರ್ಥಿ ಹಾಗೂ ಎಡನೀರು ಡಾ. ಸುಬ್ರಹ್ಮಣ್ಯ ಭಟ್-ಸರೋಜ ಎಸ್ ಭಟ್ ದಂಪತಿ ಪುತ್ರಿ.




